ನ್ಯಾಯಸ್ಥಾಪಕರು 3:14

ಇಸ್ರಾಯೇಲ್‌ ಮಕ್ಕಳು ಮೊವಾಬ್ಯರ ಅರಸನಾದ ಎಗ್ಲೋನನನ್ನು ಹದಿನೆಂಟು ವರುಷ ಸೇವಿಸಿದರು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 3

12ಇಸ್ರಾಯೇಲ್‌ ಮಕ್ಕಳು ಕರ್ತನ ಮುಂದೆ ತಿರಿಗಿ ಕೆಟ್ಟತನ ಮಾಡಿದರು. ಅವರು ಕರ್ತನ ಮುಂದೆ ಕೆಟ್ಟತನ ಮಾಡಿದ್ದರಿಂದ ಕರ್ತನು ಮೋವಾಬ್ಯರ ಅರಸನಾದ ಎಗ್ಲೋನನನ್ನು ಇಸ್ರಾಯೇಲಿಗೆ ವಿರೋಧವಾಗಿ ಬಲ ಪಡಿಸಿದನು.

13ಅವನು ಅಮ್ಮೋನನ ಮತ್ತು ಅಮಾಲೇ ಕ್ಯನ ಮಕ್ಕಳನ್ನು ಕೂಡಿಸಿಕೊಂಡು ಬಂದು ಇಸ್ರಾಯೇಲ್ಯ ರನ್ನು ಹೊಡೆದು ಖರ್ಜೂರ ಗಿಡದ ಪಟ್ಟಣವನ್ನು ಸ್ವಾಧೀನಮಾಡಿಕೊಂಡನು.

14ಇಸ್ರಾಯೇಲ್‌ ಮಕ್ಕಳು ಮೊವಾಬ್ಯರ ಅರಸನಾದ ಎಗ್ಲೋನನನ್ನು ಹದಿನೆಂಟು ವರುಷ ಸೇವಿಸಿದರು.

15ಆದರೆ ಇಸ್ರಾಯೇಲ್‌ ಮಕ್ಕಳು ಕರ್ತನನ್ನು ಕೂಗಿದಾಗ ಕರ್ತನು ಅವರಿಗೆ ಬೆನ್ಯಾವಿಾನ ನಾದ ಗೇರನ ಮಗನಾದ ಏಹೂದನನ್ನು ರಕ್ಷಿಸುವದಕ್ಕೆ ಎಬ್ಬಿಸಿದನು. ಅವನು ಎಡಗೈಯವನಾಗಿದ್ದನು. ಅವನ ಕೈಯಿಂದ ಇಸ್ರಾಯೇಲ್‌ ಮಕ್ಕಳು ಮೋವಾಬಿನ ಅರಸನಾದ ಎಗ್ಲೋನನಿಗೆ ಕಾಣಿಕೆಯನ್ನು ಕಳುಹಿಸಿ ದರು.

16ಏಹೂದನು ಇಬ್ಬಾಯಿಯ ಒಂದು ಮೊಳ ಉದ್ದವಾದ ಒಂದು ಕಠಾರಿಯನ್ನು ತನಗೆ ಮಾಡಿ ಕೊಂಡು ಅದನ್ನು ತನ್ನ ವಸ್ತ್ರದ ಕೆಳಗೆ ತನ್ನ ಬಲಗಡೆ ತೊಡೆಯಲ್ಲಿ ಕಟ್ಟಿಕೊಂಡು

ನ್ಯಾಯಸ್ಥಾಪಕರು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी