೨ ಪೂರ್ವಕಾಲವೃತ್ತಾಂತ 17:9

ಇವರು ಯೆಹೂದದಲ್ಲಿ ಬೋಧಿಸಿದರು. ಅವರ ಬಳಿಯಲ್ಲಿ ಕರ್ತನ ನ್ಯಾಯಪ್ರಮಾಣದ ಪುಸ್ತಕ ಇತ್ತು; ಯೆಹೂದದ ಸಮಸ್ತ ಪಟ್ಟಣಗಳನ್ನು ಸಂಚರಿಸಿ ಜನರಿಗೆ ಬೋಧಿಸಿದರು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 17

7ಇದಲ್ಲದೆ ಅವನ ಆಳ್ವಿಕೆಯ ಮೂರನೇ ವರುಷ ದಲ್ಲಿ ಅವನು ತನ್ನ ಪ್ರಧಾನರಾದ ಬೆನ್ಹೈಲನನ್ನೂ ಓಬದ್ಯನನ್ನೂ ಜೆಕರ್ಯನನ್ನೂ ನೆತನೇಲನನ್ನೂ ವಿಾಕಾ ಯನನ್ನೂ ಯೆಹೂದದ ಪಟ್ಟಣಗಳಲ್ಲಿ ಬೋಧಿಸಲು ಕರೇಕಳುಹಿಸಿದನು.

8ಅವರ ಸಂಗಡ ಲೇವಿಯರಾದ ಶೆಮಾಯನನ್ನೂ ನೆತನ್ಯನನ್ನೂ ಜೆಬದ್ಯನನ್ನೂ ಅಸಾ ಹೇಲನನ್ನೂ ಶೆವಿಾರಾಮೋತನನ್ನೂ ಯೆಹೋನಾತಾ ನನ್ನೂ ಅದೋನೀಯನನ್ನೂ ಟೋಬೀಯನನ್ನೂ ಟೋಬದೋನಿಯನನ್ನೂ ಇವರ ಸಂಗಡ ಯಾಜಕ ರಾದ ಎಲೀಷಾಮನನ್ನೂ ಯೆಹೋರಾಮನನ್ನೂ ಕಳು ಹಿಸಿದನು.

9ಇವರು ಯೆಹೂದದಲ್ಲಿ ಬೋಧಿಸಿದರು. ಅವರ ಬಳಿಯಲ್ಲಿ ಕರ್ತನ ನ್ಯಾಯಪ್ರಮಾಣದ ಪುಸ್ತಕ ಇತ್ತು; ಯೆಹೂದದ ಸಮಸ್ತ ಪಟ್ಟಣಗಳನ್ನು ಸಂಚರಿಸಿ ಜನರಿಗೆ ಬೋಧಿಸಿದರು.

10ಕರ್ತನ ಭಯವು ಯೆಹೂದದ ಸುತ್ತಲಿರುವ ದೇಶಗಳ ಸಮಸ್ತ ರಾಜ್ಯಗಳ ಮೇಲೆ ಇದ್ದದ್ದರಿಂದ ಅವರು ಯೆಹೋಷಾಫಾಟನ ಮೇಲೆ ಯುದ್ಧಮಾಡ ಲಿಲ್ಲ.

11ಇದಲ್ಲದೆ ಫಿಲಿಷ್ಟಿಯರಲ್ಲಿ ಕೆಲವರು ಯೆಹೋ ಷಾಫಾಟನಿಗೆ ಕಾಣಿಕೆಗಳನ್ನೂ ಕಪ್ಪದ ಹಣವನ್ನೂ ತಂದರು, ಅರಬ್ಬಿ ದೇಶದವರು ತಮ್ಮ ಮಂದೆಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ ಏಳು ಸಾವಿರದ ಏಳು ನೂರು ಹೋತಗಳನ್ನೂ ತಂದರು.

೨ ಪೂರ್ವಕಾಲವೃತ್ತಾಂತ 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी