ನ್ಯಾಯಸ್ಥಾಪಕರು 21:15

ಕರ್ತನು ಇಸ್ರಾಯೇಲ್‌ ಗೋತ್ರಗಳಲ್ಲಿ ಒಂದು ಲೋಪವನ್ನು ಮಾಡಿದ್ದರಿಂದ ಜನರು ಬೆನ್ಯಾವಿಾನ ನಿಗಾಗಿ ಪಶ್ಚಾತ್ತಾಪಪಟ್ಟರು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 21

13ಆಗ ಸಭೆಯವ ರೆಲ್ಲರೂ ರಿಮ್ಮೋನ್‌ ಗುಡ್ಡದಲ್ಲಿರುವ ಬೆನ್ಯಾವಿಾನನ ಮಕ್ಕಳ ಸಂಗಡ ಮಾತನಾಡಿ ಅವರಿಗೆ ಸಮಾಧಾನ ವನ್ನು ಸಾರಲು ಕೆಲವರನ್ನು ಕಳುಹಿಸಿದರು.

14ಆ ಕಾಲದಲ್ಲಿ ಬೆನ್ಯಾವಿಾನ್ಯರು ತಿರಿಗಿ ಅವರ ಬಳಿಗೆ ಬಂದರು. ಅವರು ಯಾಬೇಷ್‌ ಗಿಲ್ಯಾದಿನ ಸ್ತ್ರೀಯ ರಲ್ಲಿ ಜೀವದಿಂದ ಉಳಿಸಿದ ಸ್ತ್ರೀಯರನ್ನು ಅವರಿಗೆ ಹೆಂಡತಿಯರಾಗಿ ಕೊಟ್ಟರು. ಅದಾಗ್ಯೂ ಅವರಿಗೆ ತಕ್ಕಷ್ಟು ಹೆಂಡತಿಯರು ಸಿಕ್ಕಲಿಲ್ಲ.

15ಕರ್ತನು ಇಸ್ರಾಯೇಲ್‌ ಗೋತ್ರಗಳಲ್ಲಿ ಒಂದು ಲೋಪವನ್ನು ಮಾಡಿದ್ದರಿಂದ ಜನರು ಬೆನ್ಯಾವಿಾನ ನಿಗಾಗಿ ಪಶ್ಚಾತ್ತಾಪಪಟ್ಟರು.

16ಸಭೆಯ ಹಿರಿಯರುಬೆನ್ಯಾವಿಾನನ ಗೋತ್ರದ ಸ್ತ್ರೀಯರು ನಾಶವಾದದ್ದ ರಿಂದ ಉಳಿದ ಜನರಿಗೆ ಹೆಂಡತಿಯರು ದೊರಕುವದ ಕ್ಕಾಗಿ ಏನು ಮಾಡೋಣ ಅಂದರು.

17ಇಸ್ರಾಯೇಲಿ ನಲ್ಲಿ ಒಂದು ಗೋತ್ರವು ಅಳಿದು ಹೋಗದ ಹಾಗೆ ತಪ್ಪಿಸಿಕೊಂಡ ಬೆನ್ಯಾವಿಾನ್ಯರಿಗೆ ಬಾಧ್ಯತೆ ಇರಬೇಕು.

ನ್ಯಾಯಸ್ಥಾಪಕರು 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी