ಯಾನೋಹದಿಂದ ಅಟಾರೋತಿಗೂ ನಾರಾಕ್ಕೂ ಇಳಿದು ಯೆರಿಕೋವಿನ ಬಳಿಯಲ್ಲಿ ಬಂದು ಯೊರ್ದನಿಗೆ ಮುಗಿಯುವದು.
5ಅವರ ಕುಟುಂಬಗಳ ಪ್ರಕಾರ ಎಫ್ರಾಯಾಮ್ ಮಕ್ಕಳ ಮೇರೆಯು ಹೀಗಿತ್ತು: ಕೆಳಗಡೆ ಮೂಡಣದ ಮೇರೆಯು ಅಟಾರೋತದ್ದಾನಿಂದ ಪ್ರಾರಂಭಿಸಿ ಮೇಲ್ಗಡೆ ಪಶ್ಚಿಮದ ಮೇರೆ ಬೇತ್‌ಹೋರೋನಿನ ವರೆಗೂ ಇತ್ತು.
6ಪಶ್ಚಿಮದ ಮೇರೆ ಮಿಕ್ಮೆತಾತಿನಿಂದ ಉತ್ತರಕ್ಕೆ ಹೊರಟು ಮೂಡಣಕ್ಕೆ ತಾನತ್ ಶೀಲೋವಿಗೆ ತಿರುಗಿ ಯಾನೋಹಕ್ಕೆ ಮೂಡಣ ಕಡೆಯಾಗಿ ಹಾದು ಹೋಗಿ
7ಯಾನೋಹದಿಂದ ಅಟಾರೋತಿಗೂ ನಾರಾಕ್ಕೂ ಇಳಿದು ಯೆರಿಕೋವಿನ ಬಳಿಯಲ್ಲಿ ಬಂದು ಯೊರ್ದನಿಗೆ ಮುಗಿಯುವದು.
8ತಪ್ಪೂಹದಿಂದ ಪಶ್ಚಿಮದ ಮೇರೆಯೂ ಕಾನಾ ನದಿಗೆ ಹೋಗಿ ಸಮುದ್ರದಲ್ಲಿ ಮುಗಿಯುವದು. ಇದು ಎಫ್ರಾಯಾ ಮನ ಮಕ್ಕಳ ಗೋತ್ರ, ಅವರ ಕುಂಟುಂಬಗಳ ಪ್ರಕಾರವೇ ಉಂಟಾದ ಬಾಧ್ಯತೆ.
9ಎಫ್ರಾಯಾಮನ ಮಕ್ಕಳಿಗೆ ಕೊಡಲ್ಪಟ್ಟ ಎಲ್ಲಾ ಪಟ್ಟಣಗಳೂ ಅವುಗಳ ಗ್ರಾಮಗಳೂ ಮನಸ್ಸೆಯ ಮಕ್ಕಳ ಬಾಧ್ಯತೆಯ ಮಧ್ಯೆ ಪ್ರತ್ಯೇಕವಾಗಿ ಕೊಡಲ್ಪಟ್ಟವು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ