ಧರ್ಮೋಪದೇಶಕಾಂಡ 4:8

ಇದಲ್ಲದೆ ನಾನು ಈಹೊತ್ತು ನಿಮ್ಮ ಮುಂದೆ ಇಡುವ ಈ ಎಲ್ಲಾ ನ್ಯಾಯಪ್ರಮಾಣದ ಪ್ರಕಾರ ನೀತಿಯುಳ್ಳ ನಿಯಮ ನ್ಯಾಯಗಳುಳ್ಳ ದೊಡ್ಡ ಜನಾಂಗ ಯಾವದು?

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 4

6ಹೀಗಿರುವ ದರಿಂದ ನೀವು ಅವುಗಳನ್ನು ಕೈಕೊಂಡು ಅನುಸರಿಸಿರಿ; ಯಾಕಂದರೆ ಜನಾಂಗಗಳ ಮುಂದೆ ಇರುವ ನಿಮ್ಮ ಜ್ಞಾನವೂ ನಿಮ್ಮ ವಿವೇಕವೂ ಇದೇ ಆಗಿದೆ. ಅವರು ಈ ನಿಯಮಗಳನ್ನೆಲ್ಲಾ ಕೇಳಿ--ನಿಶ್ಚಯವಾಗಿ ಈ ದೊಡ್ಡ ಜನಾಂಗವು ಜ್ಞಾನವೂ ವಿವೇಕವೂ ಉಳ್ಳ ಜನವಾಗಿದೆ ಅನ್ನುವರು.

7ನಾವು ಆತನಿಗೆ ಮೊರೆ ಯಿಡುವ ಎಲ್ಲಾ ವಿಷಯಗಳಲ್ಲಿ ನಮ್ಮ ದೇವರಾದ ಕರ್ತನು ನಮಗೆ ಸವಿಾಪವಿರುವ ಪ್ರಕಾರ ಬೇರೆ ಸವಿಾಪವಾದ ದೇವರುಳ್ಳ ದೊಡ್ಡ ಜನಾಂಗ ಯಾವದು?

8ಇದಲ್ಲದೆ ನಾನು ಈಹೊತ್ತು ನಿಮ್ಮ ಮುಂದೆ ಇಡುವ ಈ ಎಲ್ಲಾ ನ್ಯಾಯಪ್ರಮಾಣದ ಪ್ರಕಾರ ನೀತಿಯುಳ್ಳ ನಿಯಮ ನ್ಯಾಯಗಳುಳ್ಳ ದೊಡ್ಡ ಜನಾಂಗ ಯಾವದು?

9ನಿನ್ನ ಕಣ್ಣುಗಳು ನೋಡಿದ ಕಾರ್ಯಗಳನ್ನು ನೀನು ಮರೆಯದ ಹಾಗೆಯೂ ನೀನು ಬದುಕುವ ದಿನಗಳೆಲ್ಲಾ ಅವು ನಿನ್ನ ಹೃದಯಕ್ಕೆ ದೂರವಾಗದ ಹಾಗೆಯೂ ಬಹು ಜಾಗ್ರತೆಯಾಗಿದ್ದು ನಿನ್ನ ಪ್ರಾಣ ವನ್ನು ಬಹಳವಾಗಿ ಕಾಪಾಡು; ಅವುಗಳನ್ನು ನಿನ್ನ ಮಕ್ಕಳಿಗೂ ನಿನ್ನ ಮಕ್ಕಳ ಮಕ್ಕಳಿಗೂ ಬೋಧಿಸು.

10ನೀನು ಹೋರೇಬಿನಲ್ಲಿ ಕರ್ತನ ಮುಂದೆ ನಿಂತ ದಿವಸ ಉಂಟಲ್ಲವೇ? ಆಗ ಕರ್ತನು ನನಗೆ--ಜನರನ್ನು ನನಗಾಗಿ ಕೂಡಿಸು; ಅವರು ಭೂಮಿಯ ಮೇಲೆ ಬದುಕುವ ದಿವಸಗಳೆಲ್ಲಾ ನನಗೆ ಭಯಭಕ್ತಿಯಿಂದಿ ರುವದನ್ನು ಕಲಿತು ತಮ್ಮ ಮಕ್ಕಳಿಗೂ ಬೋಧಿಸುವ ಹಾಗೆ ಅವರಿಗೆ ನನ್ನ ವಾಕ್ಯಗಳನ್ನು ಹೇಳಿಕೊಡು ವೆನು ಅಂದನು

ಧರ್ಮೋಪದೇಶಕಾಂಡ 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी