ಯೂದನು 1:8

ಹಾಗೆಯೇ ಈ ದುಸ್ವಪ್ನದವರು ಶರೀರವನ್ನು ಮಲಿನ ಮಾಡಿಕೊಳ್ಳುವವರೂ ಪ್ರಭುತ್ವವನ್ನು ಅಸಡ್ಡೆ ಮಾಡು ವವರೂ ಗೌರವವುಳ್ಳವರನ್ನು ದೂಷಿಸುವವರೂ ಆಗಿದ್ದಾರೆ.

ಸಂದರ್ಭದೊಂದಿಗೆ ಓದಿ · ಯೂದನು 1

6ತಮ್ಮ ಮೊದಲಿನ ಸ್ಥಿತಿಯನ್ನು ಕಾಪಾಡದೆ ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೂತರಿಗೆ ಆತನು ನಿತ್ಯವಾದ ಬೇಡಿಗಳನ್ನು ಹಾಕಿ ಮಹಾ ದಿನದ ತೀರ್ಪಿಗಾಗಿ ಅವರನ್ನು ಕತ್ತಲೆ ಯೊಳಗೆ ಕಾದಿಟ್ಟಿದ್ದಾನೆ.

7ಸೊದೋಮ ಗೊಮೋರ ದವರೂ ಹಾಗೆಯೇ ಅವುಗಳ ಸುತ್ತುಮುತ್ತಣ ಪಟ್ಟಣಗಳವರೂ ಅದೇ ರೀತಿಯಲ್ಲಿ ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು ಅನ್ಯ ಶರೀರವನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ಪ್ರತಿದಂಡನೆಯನ್ನು ಅನುಭವಿಸುತ್ತಾ ಉದಾಹರಣೆಗಾಗಿ ಇಡಲ್ಪಟ್ಟಿದ್ದಾರೆ.

8ಹಾಗೆಯೇ ಈ ದುಸ್ವಪ್ನದವರು ಶರೀರವನ್ನು ಮಲಿನ ಮಾಡಿಕೊಳ್ಳುವವರೂ ಪ್ರಭುತ್ವವನ್ನು ಅಸಡ್ಡೆ ಮಾಡು ವವರೂ ಗೌರವವುಳ್ಳವರನ್ನು ದೂಷಿಸುವವರೂ ಆಗಿದ್ದಾರೆ.

9ಆದರೂ ಪ್ರಧಾನ ದೇವದೂತನಾದ ಮಿಕಾಯೇಲನು ಮೋಶೆಯ ಶವದ ವಿಷಯದಲ್ಲಿ ಸೈತಾನನೊಂದಿಗೆ ವ್ಯಾಜ್ಯವಾಡಿ ವಾಗ್ವಾದ ಮಾಡಿದಾಗ ಅವನು ಸೈತಾನನನ್ನು ದೂಷಿಸುವದಕ್ಕೆ ಧೈರ್ಯ ಗೊಳ್ಳದೆ--ಕರ್ತನು ನಿನ್ನನ್ನು ಗದರಿಸಲಿ ಅಂದನು.

10ಆದರೆ ಈ ಜನರು ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡುತ್ತಾರೆ ಮತ್ತು ತಾವು ವಿವೇಕಶೂನ್ಯ ಮೃಗಗಳಂತೆ ಸ್ವಾಭಾವಿಕವಾಗಿ ಯಾವವುಗಳನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ.

ಯೂದನು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी