ನೀವು ಇಸ್ರಾಯೇಲ್ ಮಕ್ಕಳಿಗೆ ಕರ್ತನು ಮೋಶೆಯ ಕೈಗೆ ಒಪ್ಪಿಸಿ ಹೇಳಿದ ಹಾಗೆ ಎಲ್ಲಾ ಕಟ್ಟಳೆಗಳನ್ನು ಬೋಧಿಸುವದಕ್ಕಾಗಿಯೂ ಇರುವದು.
9ನೀನೂ ನಿನ್ನ ಮಕ್ಕಳೂ ದ್ರಾಕ್ಷಾರಸವನ್ನಾ ಗಲಿ ಮದ್ಯಪಾನವನ್ನಾಗಲಿ ಕುಡಿದು ಸಭೆಯ ಗುಡಾರ ದೊಳಗೆ ಬರಬಾರದು; ಹಾಗೆ ಬಂದರೆ ಸತ್ತೀರಿ. ನಿಮ್ಮ ವಂಶಾವಳಿಯು ಇರುವ ವರೆಗೂ ಇದು ಶಾಶ್ವತವಾಗಿ ರುವ ಕಟ್ಟಳೆಯಾಗಿದೆ.
10ನೀವು ಶುದ್ಧವಾದದ್ದಕ್ಕೂ ಅಶುದ್ಧವಾದದ್ದಕ್ಕೂ ಪವಿತ್ರವಾದದ್ದಕ್ಕೂ ಅಪವಿತ್ರ ವಾದದ್ದಕ್ಕೂ ವ್ಯತ್ಯಾಸವನ್ನು ತೋರಿಸುವದಕ್ಕಾಗಿಯೂ
11ನೀವು ಇಸ್ರಾಯೇಲ್ ಮಕ್ಕಳಿಗೆ ಕರ್ತನು ಮೋಶೆಯ ಕೈಗೆ ಒಪ್ಪಿಸಿ ಹೇಳಿದ ಹಾಗೆ ಎಲ್ಲಾ ಕಟ್ಟಳೆಗಳನ್ನು ಬೋಧಿಸುವದಕ್ಕಾಗಿಯೂ ಇರುವದು.
12ಮೋಶೆಯು ಆರೋನನೊಂದಿಗೂ ಉಳಿದ ಅವನ ಕುಮಾರರಾದ ಎಲ್ಲಾಜಾರನೊಂದಿಗೂ ಈತಾ ಮಾರನೊಂದಿಗೂ ಮಾತನಾಡಿ ಹೇಳಿದ್ದೇನಂದರೆಕರ್ತನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಗಳಲ್ಲಿ ಉಳಿದಿರುವ ಆಹಾರ ಸಮರ್ಪಣೆಯನ್ನು ತೆಗೆದು ಕೊಂಡು ಅದನ್ನು ಯಜ್ಞವೇದಿಯ ಬಳಿಯಲ್ಲಿ ಹುಳಿ ಯಿಲ್ಲದೆ ತಿನ್ನಿರಿ; ಅದು ಅತಿ ಪರಿಶುದ್ಧವಾದದ್ದು.
13ನೀವು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಬೆಂಕಿಯಿಂದ ಮಾಡಿದ ಕರ್ತನ ಯಜ್ಞಗಳಲ್ಲಿ ನಿನಗೂ ನಿನ್ನ ಕುಮಾರರಿಗೂ ಇವು ಸಲ್ಲತಕ್ಕವುಗಳು. ಹೀಗೆ ನಾನು ಆಜ್ಞೆ ಹೊಂದಿದ್ದೇನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ