ಯೆಹೋಶುವ 24:17

ನಮ್ಮ ದೇವ ರಾದ ಕರ್ತನು ತಾನೇ ನಮ್ಮನ್ನೂ ನಮ್ಮ ತಂದೆಗಳನ್ನೂ ದಾಸತ್ವದ ಮನೆಯಾದ ಐಗುಪ್ತದೇಶದಿಂದ ಬರಮಾಡಿ ದ್ದಾನೆ. ನಮ್ಮ ಕಣ್ಣುಗಳ ಮುಂದೆ ಆ ದೊಡ್ಡ ಅದ್ಭುತ ಗಳನ್ನು ಮಾಡಿ ನಾವು ನಡೆದ ಎಲ್ಲಾ ಮಾರ್ಗಗಳ ಲ್ಲಿಯೂ ನಾವು ಅವರ ಮಧ್ಯದಲ್ಲಿ ಹಾದು ಬಂದ ಎಲ್ಲಾ ಜನಗಳಲ್ಲಿಯೂ ನಮ್ಮನ್ನು ಕಾಪಾಡಿದಾತನು.

ಸಂದರ್ಭದೊಂದಿಗೆ ಓದಿ · ಯೆಹೋಶುವ 24

15ಕರ್ತನನ್ನು ಸೇವಿಸುವದು ನಿಮಗೆ ಕೆಟ್ಟದ್ದಾಗಿ ಕಂಡರೆ ಈಹೊತ್ತು ನೀವು ಯಾರನ್ನು ಸೇವಿಸುವಿರಿ? ನಿಮ್ಮ ತಂದೆಗಳು ನದಿಯ ಆಚೆ ಸೇವಿ ಸಿದ ದೇವರುಗಳನ್ನೋ ಇಲ್ಲವೆ ನೀವು ವಾಸವಾಗಿರುವ ಅಮೋರಿಯರ ದೇವರುಗಳನ್ನೋ? ನೀವು ಆರಿಸಿ ಕೊಳ್ಳಿರಿ; ಆದರೆ ನಾನೂ ನನ್ನ ಮನೆಯವರೂ ಕರ್ತನನ್ನೇ ಸೇವಿಸುವೆವು ಅಂದನು.

16ಜನರು ಅವನಿಗೆ ಪ್ರತ್ಯುತ್ತರಕೊಟ್ಟು--ನಾವು ಕರ್ತನನ್ನು ಬಿಟ್ಟು ಅನ್ಯ ದೇವತೆಗಳನ್ನು ಸೇವಿಸುವ ಕಾರ್ಯವು ನಮಗೆ ದೂರವಾಗಿರಲಿ.

17ನಮ್ಮ ದೇವ ರಾದ ಕರ್ತನು ತಾನೇ ನಮ್ಮನ್ನೂ ನಮ್ಮ ತಂದೆಗಳನ್ನೂ ದಾಸತ್ವದ ಮನೆಯಾದ ಐಗುಪ್ತದೇಶದಿಂದ ಬರಮಾಡಿ ದ್ದಾನೆ. ನಮ್ಮ ಕಣ್ಣುಗಳ ಮುಂದೆ ಆ ದೊಡ್ಡ ಅದ್ಭುತ ಗಳನ್ನು ಮಾಡಿ ನಾವು ನಡೆದ ಎಲ್ಲಾ ಮಾರ್ಗಗಳ ಲ್ಲಿಯೂ ನಾವು ಅವರ ಮಧ್ಯದಲ್ಲಿ ಹಾದು ಬಂದ ಎಲ್ಲಾ ಜನಗಳಲ್ಲಿಯೂ ನಮ್ಮನ್ನು ಕಾಪಾಡಿದಾತನು.

18ಇದಲ್ಲದೆ ದೇಶದಲ್ಲಿ ವಾಸವಾಗಿದ್ದ ಅಮೋರಿಯರ ಸಕಲ ಜನಗಳನ್ನು ಕರ್ತನು ನಮ್ಮ ಮುಂದೆ ಹೊರಡಿಸಿ ಬಿಟ್ಟನು. ಆದದರಿಂದ ನಾವು ಕರ್ತನನ್ನೇ ಸೇವಿಸುವೆವು; ಆತನು ನಮ್ಮ ದೇವರು ಅಂದರು.

19ಅದಕ್ಕೆ ಯೆಹೋ ಶುವನು ಜನರಿಗೆ--ನೀವು ಕರ್ತನನ್ನು ಸೇವಿಸಲಾರಿರಿ; ಯಾಕಂದರೆ ಆತನು ಪರಿಶುದ್ಧನಾದ ದೇವರು, ರೋಷ ವುಳ್ಳ ದೇವರು; ಆತನು ನಿಮ್ಮ ದ್ರೋಹಗಳನ್ನೂ ಪಾಪಗಳನ್ನೂ ಮನ್ನಿಸನು.

ಯೆಹೋಶುವ 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी