ಕರ್ತನು--ಆ ದಿನದಲ್ಲಿ ಆಗುವದೇನಂದರೆ, ನೀನು ನನ್ನನ್ನು ಇನ್ನು ಮೇಲೆ ಬಾಳಿ ಎಂದು ಕರೆಯದೆ ಈಶೀ ಎಂದು ಕರೆಯುವಿ.
14ಆದದರಿಂದ ಇಗೋ, ನಾನು ಅವಳನ್ನು ಮೋಹಿಸಿ ಅವಳನ್ನು ಅರಣ್ಯದೊಳಗೆ ಕರೆದುಕೊಂಡು ಬಂದು ಅವಳ ಸಂಗಡ ಹಿತಕರವಾಗಿ ಮಾತನಾಡು ವೆನು.
15ಅವಳ ದ್ರಾಕ್ಷೇ ತೋಟಗಳನ್ನು ಅಲ್ಲಿರುವಾ ಗಲೇ ಅವಳಿಗೆ ಹಿಂದಕ್ಕೆ ಕೊಡುವೆನು. ಆಕೋರಿನ ತಗ್ಗನ್ನೇ ಅವಳ ನಿರೀಕ್ಷೆಗೆ ದ್ವಾರವನ್ನಾಗಿ ಮಾಡುವೆನು; ಅಲ್ಲಿ ಅವಳು ಯೌವನದ ದಿನಗಳಲ್ಲಿಯೂ ಐಗುಪ್ತ ದೇಶದೊಳಗಿಂದ ಹೊರಟುಬಂದ ದಿನದಲ್ಲಿಯೂ ಆದ ಹಾಗೆ ಹಾಡುವಳು.
16ಕರ್ತನು--ಆ ದಿನದಲ್ಲಿ ಆಗುವದೇನಂದರೆ, ನೀನು ನನ್ನನ್ನು ಇನ್ನು ಮೇಲೆ ಬಾಳಿ ಎಂದು ಕರೆಯದೆ ಈಶೀ ಎಂದು ಕರೆಯುವಿ.
17ಬಾಳ್ ದೇವತೆಗಳ ಹೆಸರುಗಳನ್ನು ಅವಳ ಬಾಯಿಯೊಳಗಿಂದ ತೆಗೆದು ಹಾಕುವೆನು; ಅವು ಇನ್ನು ತಮ್ಮ ಹೆಸರಿನಿಂದ ಜ್ಞಾಪಕ ಮಾಡಲ್ಪಡುವದೇ ಇಲ್ಲ.
18ಆ ದಿನದಲ್ಲಿ ಅವರಿ ಗೋಸ್ಕರ ಅಡವಿಯ ಮೃಗಗಳ ಸಂಗಡಲೂ ಆಕಾಶದ ಪಕ್ಷಿಗಳ ಸಂಗಡಲೂ ಭೂಮಿಯ ಕ್ರಿಮಿಗಳ ಸಂಗಡಲೂ ಒಡಂಬಡಿಕೆ ಮಾಡುವೆನು. ನಾನು ಬಿಲ್ಲನ್ನೂ ಕತ್ತಿ ಯನ್ನೂ ಯುದ್ಧವನ್ನೂ ದೇಶದೊಳಗಿಂದ ಮುರಿದು ಹಾಕಿ ಅವರನ್ನು ನಿರ್ಭಯವಾಗಿ ಮಲಗುವಂತೆ ಮಾಡುವೆನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ