ಯೋಹಾನನು 7:18

ತನ್ನ ವಿಷಯವಾಗಿ ತಾನೇ ಮಾತನಾಡುವವನು ತನ್ನ ಸ್ವಂತ ಮಹಿಮೆಯನ್ನು ಹುಡುಕುತ್ತಾನೆ; ಆದರೆ ತನ್ನನ್ನು ಕಳುಹಿಸಿದಾತನ ಮಹಿಮೆಯನ್ನು ಹುಡುಕುವಾತನೇ ಸತ್ಯವಂತನು; ಆತ ನಲ್ಲಿ ಅನೀತಿಯಿಲ್ಲ.

ಸಂದರ್ಭದೊಂದಿಗೆ ಓದಿ · ಯೋಹಾನನು 7

16ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವ ರಿಗೆ--ನನ್ನ ಬೋಧನೆಯು ನನ್ನದಲ್ಲ; ಆದರೆ ನನ್ನನ್ನು ಕಳುಹಿಸಿದಾತನದೇ.

17ಯಾವನಾದರೂ ಆತನ ಚಿತದಂತೆ ಮಾಡಿದರೆ ಈ ಬೋಧನೆಯು ದೇವರದೋ ಅಥವಾ ನನ್ನಷ್ಟಕ್ಕೆ ನಾನೇ ಹೇಳುತ್ತೇನೋ ಎಂಬದು ಅವನಿಗೆ ತಿಳಿಯುವದು.

18ತನ್ನ ವಿಷಯವಾಗಿ ತಾನೇ ಮಾತನಾಡುವವನು ತನ್ನ ಸ್ವಂತ ಮಹಿಮೆಯನ್ನು ಹುಡುಕುತ್ತಾನೆ; ಆದರೆ ತನ್ನನ್ನು ಕಳುಹಿಸಿದಾತನ ಮಹಿಮೆಯನ್ನು ಹುಡುಕುವಾತನೇ ಸತ್ಯವಂತನು; ಆತ ನಲ್ಲಿ ಅನೀತಿಯಿಲ್ಲ.

19ಮೋಶೆಯು ನಿಮಗೆ ನ್ಯಾಯ ಪ್ರಮಾಣವನ್ನು ಕೊಟ್ಟಾಗ್ಯೂ ನಿಮ್ಮಲ್ಲಿ ಒಬ್ಬನೂ ಆ ನ್ಯಾಯಪ್ರಮಾಣವನ್ನು ಕೈಕೊಳ್ಳಲಿಲ್ಲವಲ್ಲಾ; ನೀವು ಯಾಕೆ ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ ಎಂದು ಹೇಳಿದನು.

20ಅದಕ್ಕೆ ಜನರು ಪ್ರತ್ಯುತ್ತರವಾಗಿ--ನಿನಗೆ ದೆವ್ವ ಹಿಡಿದಿದೆ; ನಿನ್ನನ್ನು ಕೊಲ್ಲುವದಕ್ಕೆ ನೋಡು ವವರು ಯಾರು ಅಂದರು.

ಯೋಹಾನನು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी