ಅವಳಿಂದ ಐಶ್ವರ್ಯವಂತ ರಾದ ಈ ಸರಕುಗಳ ವರ್ತಕರು ಅವಳ ಯಾತನೆಗೆ ಭಯಪಟ್ಟು ದೂರದಲ್ಲಿ ನಿಂತು ಅಳುತ್ತಾ ಗೋಳಾ ಡುತ್ತಾ--
13ಲವಂಗ, ಚೆಕ್ಕೆ, ಧೂಪ, ಸುಗಂಧ ತೈಲ, ಸಾಂಬ್ರಾಣಿ, ದ್ರಾಕ್ಷಾರಸ, ಎಣ್ಣೆ, ನಯವಾದಹಿಟ್ಟು, ಗೋಧಿ, ದನಗಳು, ಕುರಿ ಗಳು, ಕುದುರೆಗಳು, ರಥಗಳು, ಗುಲಾಮರು, ಮನುಷ್ಯರ ಪ್ರಾಣಗಳು ಇವೇ ಮೊದಲಾದವುಗಳನ್ನು ಯಾರೂ ಎಂದೂ ಕೊಂಡುಕೊಳ್ಳುವರಿಲ್ಲ ಎಂದು ದುಃಖಿಸುವರು.
14ನಿನ್ನ ಜೀವವು ಅಪೇಕ್ಷಿಸಿದ ಹಣ್ಣು ಗಳು ನಿನ್ನನ್ನು ಬಿಟ್ಟು ಹೋದವು; ಸೊಗಸಾಗಿಯೂ ಶೋಭಾಯಮಾನವಾಗಿಯೂ ಇರುವವುಗಳೆಲ್ಲವೂ ನಿನ್ನನ್ನು ಬಿಟ್ಟು ಹೋದವು. ಅವು ಇನ್ನು ಮೇಲೆ ನಿನಗೆ ಸಿಕ್ಕುವದೇ ಇಲ್ಲ.
15ಅವಳಿಂದ ಐಶ್ವರ್ಯವಂತ ರಾದ ಈ ಸರಕುಗಳ ವರ್ತಕರು ಅವಳ ಯಾತನೆಗೆ ಭಯಪಟ್ಟು ದೂರದಲ್ಲಿ ನಿಂತು ಅಳುತ್ತಾ ಗೋಳಾ ಡುತ್ತಾ--
16ಅಯ್ಯೋ, ಅಯ್ಯೋ, ಮಹಾನಗರಿಯೇ, ನಯವಾದ ನಾರುಮಡಿಯನ್ನೂ ಧೂಮ್ರವರ್ಣದ ವಸ್ತ್ರವನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ ಅಮೂಲ್ಯವಾದ ಕಲ್ಲುಗಳು ಮುತ್ತುಗಳು ಇವುಗಳಿಂದ ಅಲಂಕರಿಸಲ್ಪಟ್ಟವಳೇ,
17ಅಷ್ಟು ದೊಡ್ಡ ಐಶ್ವರ್ಯವು ಒಂದೇ ಗಳಿಗೆಯಲ್ಲಿ ಇಲ್ಲದೆ ಹೋಯಿತಲ್ಲಾ ಅನ್ನುವರು. ಇದಲ್ಲದೆ ಹಡಗುಗಳ ಯಜಮಾನರೂ ಹಡಗುಗಳಲ್ಲಿ ಜೊತೆಯಾಗಿರುವವರೂ ನಾವಿಕರೂ ಸಮುದ್ರದ ಮೇಲೆ ವ್ಯಾಪಾರ ಮಾಡುವವರೆಲ್ಲರೂ ದೂರದಲ್ಲಿ ನಿಂತು
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ