ಅದು ಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದ ವಿಲ್ಲ.
7ಹೀಗೆ ಕ್ರಿಸ್ತ ಯೇಸುವಿನ ಲ್ಲಿರುವ ಕರುಣೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು ಮುಂದಣ ಯುಗಗಳಲ್ಲಿ ನಮಗೆ ತೋರಿಸಬೇಕೆಂದಿದ್ದನು.
8ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ.
9ಅದು ಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದ ವಿಲ್ಲ.
10ದೇವರು ಮುಂದಾಗಿ ನೇಮಿಸಿದ ಸತ್ಕ್ರಿಯೆ ಗಳಲ್ಲಿ ನಾವು ನಡೆಯುವಂತೆ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟವರಾದ ನಾವು ಆತನ ಕೆಲಸವಾಗಿದ್ದೇವೆ.
11ಆದಕಾರಣ ಪೂರ್ವಕಾಲದಲ್ಲಿ ಶಾರೀರಿಕವಾಗಿ ಅನ್ಯಜನರಾಗಿದ್ದು ಶರೀರದಲ್ಲಿ ಕೈಗಳಿಂದ ಮಾಡಲ್ಪಟ ಸುನ್ನತಿಯಿದ್ದವರೆಂದು ಕರೆಯಲ್ಪಟ್ಟವರಿಂದ ಸುನ್ನತಿಯಿಲ್ಲ ದವರೆಂದು ನೀವು ಕರೆಯಲ್ಪಟ್ಟಿದ್ದೀರಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ