ಯೋವೇಲ 2:23

ಹಾಗಾದರೆ ಚೀಯೋನಿನ ಮಕ್ಕಳೇ, ನಿಮ್ಮ ದೇವ ರಾದ ಕರ್ತನಲ್ಲಿ ಉಲ್ಲಾಸಿಸಿ, ಸಂತೋಷವಾಗಿರ್ರಿ; ನಿಮಗೆ ಮುಂಗಾರು ಮಳೆಯನ್ನು ಸರಿಯಾಗಿ ಕೊಡು ತ್ತಾನೆ; ಮುಂಗಾರು ಹಿಂಗಾರು ಮಳೆಗಳನ್ನು ಮುಂಚಿನ ಹಾಗೆ ನಿಮಗೆ ಸುರಿಸುತ್ತಾನೆ.

ಸಂದರ್ಭದೊಂದಿಗೆ ಓದಿ · ಯೋವೇಲ 2

21ಓ ದೇಶವೇ, ಭಯಪಡಬೇಡ, ಉಲ್ಲಾಸಿಸಿ ಸಂತೋಷವಾಗಿರು; ಕರ್ತನು ಮಹತ್ತಾದವುಗಳನ್ನು ಮಾಡುತ್ತಾನೆ.

22ಹೊಲದ ಮೃಗಗಳೇ, ಭಯಪಡಬೇಡಿರಿ; ಅಡ ವಿಯ ಮೇವಿನ ಸ್ಥಳಗಳು ಮೊಳೆಯುತ್ತವೆ; ಮರಗಳು ತಮ್ಮ ಫಲವನ್ನು ಫಲಿಸುತ್ತವೆ; ಅಂಜೂರದ ಗಿಡವೂ ದ್ರಾಕ್ಷೇ ಬಳ್ಳಿಯೂ ತಮ್ಮ ಫಲವನ್ನು ಕೊಡುತ್ತವೆ.

23ಹಾಗಾದರೆ ಚೀಯೋನಿನ ಮಕ್ಕಳೇ, ನಿಮ್ಮ ದೇವ ರಾದ ಕರ್ತನಲ್ಲಿ ಉಲ್ಲಾಸಿಸಿ, ಸಂತೋಷವಾಗಿರ್ರಿ; ನಿಮಗೆ ಮುಂಗಾರು ಮಳೆಯನ್ನು ಸರಿಯಾಗಿ ಕೊಡು ತ್ತಾನೆ; ಮುಂಗಾರು ಹಿಂಗಾರು ಮಳೆಗಳನ್ನು ಮುಂಚಿನ ಹಾಗೆ ನಿಮಗೆ ಸುರಿಸುತ್ತಾನೆ.

24ಕಣಗಳು ಧಾನ್ಯದಿಂದ ತುಂಬುವವು; ತೊಟ್ಟಿಗಳು ದ್ರಾಕ್ಷಾರಸದಿಂದಲೂ ಎಣ್ಣೆಯಿಂದಲೂ ತುಂಬಿ ತುಳುಕುವವು.

25ನಾನು ನಿಮ್ಮಲ್ಲಿ ಕಳುಹಿಸದಂಥ, ನನ್ನ ದೊಡ್ಡ ಸೈನ್ಯವಾದ ಹುಳವೂ ಕಂಬಳಿ ಹುಳವೂ ಒಳಗೆ ನಾಶಮಾಡುವ ಹುಳವೂ ಮಿಡತೆಗಳೂ ತಿಂದ ವರುಷಗಳಿಗೆ ಬದಲಾಗಿ ನಿಮಗೆ ಕೊಡುವೆನು.

ಯೋವೇಲ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी