ಆ ದಿನದಲ್ಲಿ ಆಗುವದೇ ನಂದರೆ--ಬೆಳಕು ಇಲ್ಲವೆ ಕತ್ತಲೆಯು ಸ್ಪಷ್ಟವಾಗಿರದು.
4ಆ ದಿನದಲ್ಲಿ ಆತನ ಪಾದಗಳು ಯೆರೂಸಲೇಮಿನ ಮುಂದೆ ಪೂರ್ವ ದಿಕ್ಕಿನಲ್ಲಿರುವ ಎಣ್ಣೇ ಮರದ ಗುಡ್ಡದ ಮೇಲೆ ನಿಲ್ಲುವವು; ಎಣ್ಣೇ ಮರದ ಗುಡ್ಡವು ಅದರ ನಡುವೆಯಿಂದ ಪೂರ್ವಕ್ಕೂ ಪಶ್ಚಿಮಕ್ಕೂ ಸೀಳಿ ಬಹುದೊಡ್ಡ ತಗ್ಗಾಗುವದು; ಅರ್ಧ ಗುಡ್ಡವು ಉತ್ತರಕ್ಕೂ ಅರ್ಧ ದಕ್ಷಿಣಕ್ಕೂ ಸರಿದು ಕೊಳ್ಳುವದು.
5ನೀವು ಬೆಟ್ಟಗಳ ತಗ್ಗಿಗೆ ಓಡಿಹೋಗು ವಿರಿ; ಬೆಟ್ಟಗಳ ತಗ್ಗು ಆಚೆಲಿಗೆ ಮುಟ್ಟುವದು. ಹೌದು, ಯೆಹೂದದ ಅರಸನಾದ ಉಜ್ಜೀಯನ ದಿವಸಗಳಲ್ಲಿ ನೀವು ಭೂಕಂಪಕ್ಕೆ ಓಡಿಹೋದ ಹಾಗೆ ಓಡಿಹೋಗು ವಿರಿ; ನನ್ನ ದೇವರಾದ ಕರ್ತನು ತನ್ನ ಪರಿಶುದ್ಧರೆ ಲ್ಲರ ಸಂಗಡ ಬರುವನು.
6ಆ ದಿನದಲ್ಲಿ ಆಗುವದೇ ನಂದರೆ--ಬೆಳಕು ಇಲ್ಲವೆ ಕತ್ತಲೆಯು ಸ್ಪಷ್ಟವಾಗಿರದು.
7ಆದರೆ ಕರ್ತನಿಗೆ ತಿಳಿದಿರುವ ಒಂದು ದಿನ ಇರುವದು, ಅದು ಹಗಲೂ ಅಲ್ಲ, ರಾತ್ರಿಯೂ ಅಲ್ಲ; ಆದರೆ ಸಾಯಂಕಾಲದ ಸಮಯದಲ್ಲಿ ಬೆಳಕು ಇರುವದು.
8ಆ ದಿನದಲ್ಲಿ ಆಗುವದೇನಂದರೆ, ಯೆರೂಸಲೇಮಿ ನೊಳಗಿದ್ದ ಜೀವಜಲಗಳು ಹೊರಡುವವು; ಅವುಗ ಳಲ್ಲಿ ಅರ್ಧ ಪೂರ್ವ ಸಮುದ್ರಕ್ಕೆ ಅರ್ಧ ಪಶ್ಚಿಮ ಸಮುದ್ರಕ್ಕೆ ಹೋಗುವವು; ಅದು ಬೇಸಿಗೆ ಕಾಲ ದಲ್ಲಿಯೂ ಚಳಿಗಾಲದಲ್ಲಿಯೂ ಇರುವದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ