ಎಸ್ತೇರಳು 9:15

ಇದಲ್ಲದೆ ಶೂಷ ನಿನಲ್ಲಿರುವ ಯೆಹೂದ್ಯರು ಅಡಾರೆಂಬ ತಿಂಗಳ ಹದಿನಾಲ್ಕನೇ ದಿವಸದಲ್ಲಿ ಕೂಡಿಕೊಂಡು ಶೂಷನಿನಲ್ಲಿ ಮುನ್ನೂರು ಮಂದಿಯನ್ನು ಕೊಂದರು. ಆದರೆ ಅವರು ಕೊಳ್ಳೆಯ ಮೇಲೆ ಕೈಹಾಕಲಿಲ್ಲ.

ಸಂದರ್ಭದೊಂದಿಗೆ ಓದಿ · ಎಸ್ತೇರಳು 9

13ಅದಕ್ಕೆ ಎಸ್ತೇರಳು--ಅರಸನಿಗೆ ಸಮ್ಮತಿಯಾದರೆ ಇಂದಿನ ಆಜ್ಞೆಯ ಪ್ರಕಾರ ನಾಳಿನ ದಿವಸವೂ ಶೂಷನಿನಲ್ಲಿ ಮಾಡಲು ಯೆಹೂದ್ಯರಿಗೆ ಅಪ್ಪಣೆ ಆಗಲಿ; ಮತ್ತು ಹಾಮಾನನ ಹತ್ತು ಮಂದಿ ಮಕ್ಕಳು ಗಲ್ಲಿಗೆ ಹಾಕಲ್ಪಡಲಿ ಅಂದಳು.

14ಆಗ ಅರಸನು ಹಾಗೆಯೇ ಮಾಡಲು ಆಜ್ಞಾಪಿಸಿದನು. ಆ ಆಜ್ಞೆಯು ಶೂಷನಿನಲ್ಲಿ ಕೊಡಲ್ಪಟ್ಟಾಗ ಅವರು ಹಾಮಾನನ ಹತ್ತು ಮಂದಿ ಕುಮಾರರನ್ನೂ ಗಲ್ಲಿಗೆ ಹಾಕಿದರು.

15ಇದಲ್ಲದೆ ಶೂಷ ನಿನಲ್ಲಿರುವ ಯೆಹೂದ್ಯರು ಅಡಾರೆಂಬ ತಿಂಗಳ ಹದಿನಾಲ್ಕನೇ ದಿವಸದಲ್ಲಿ ಕೂಡಿಕೊಂಡು ಶೂಷನಿನಲ್ಲಿ ಮುನ್ನೂರು ಮಂದಿಯನ್ನು ಕೊಂದರು. ಆದರೆ ಅವರು ಕೊಳ್ಳೆಯ ಮೇಲೆ ಕೈಹಾಕಲಿಲ್ಲ.

16ಹಾಗೆಯೇ ಅರಸನ ಪ್ರಾಂತ್ಯಗಳಲ್ಲಿರುವ ಮಿಕ್ಕ ಯೆಹೂದ್ಯರು ಕೂಡಿಕೊಂಡು ತಮ್ಮ ಪ್ರಾಣಗಳಿ ಗೋಸ್ಕರ ಎದ್ದು ನಿಂತು ತಮ್ಮ ಶತ್ರುಗಳಿಂದ ತಪ್ಪಿಸಿ ಕೊಂಡು ವಿಶ್ರಾಂತಿಯನ್ನು ಹೊಂದಿ ತಮ್ಮ ಹಗೆಯ ವರಲ್ಲಿ ಎಪ್ಪತ್ತೈದು ಸಾವಿರ ಮಂದಿಯನ್ನು ಕೊಂದರು; ಆದರೆ ಅವರು ಕೊಳ್ಳೆಯ ಮೇಲೆ ಕೈಹಾಕಲಿಲ್ಲ.

17ಅಡಾರ್‌ ತಿಂಗಳ ಹದಿಮೂರನೇ ದಿವಸ ಇದು ಆಯಿತು. ಅದರ ಹದಿನಾಲ್ಕನೇ ದಿವಸದಲ್ಲಿ ಅವರು ವಿಶ್ರಾಂತಿಯಾಗಿದ್ದು ಅದನ್ನು ಹಬ್ಬದ ಸಂತೋಷದ ದಿವಸವಾಗಿ ಮಾಡಿದರು.

ಎಸ್ತೇರಳು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी