ಸೇವೆಯ ಪಾತ್ರೆಗಳನ್ನು ಒಳಕ್ಕೆ ಲೆಕ್ಕದ ಪ್ರಕಾರ ತರುವದಕ್ಕೂ ಅವರಲ್ಲಿ ಕೆಲವರು ಅವುಗಳ ಮೇಲೆ ನೇಮಕವಾಗಿದ್ದರು.
26ದ್ವಾರಪಾಲಕರಲ್ಲಿರುವ ನಾಲ್ಕುಮಂದಿ ಮುಖ್ಯಸ್ಥರಾದ ಈ ಲೇವಿಯರು ತಮ್ಮ ನೇಮಕವಾದ ಉದ್ಯೋಗದಲ್ಲಿ ಇದ್ದು ದೇವರ ಆಲಯ ಉಗ್ರಾಣ ಗಳ ಮೇಲೆಯೂ ಬೊಕ್ಕಸಗಳ ಮೇಲೆಯೂ ಇದ್ದರು.
27ಈ ಅಪ್ಪಣೆಯು ಅವರದಾಗಿದದ್ದರಿಂದಲೂ ಪ್ರತಿ ಉದಯದಲ್ಲಿ ತೆರೆಯುವದು ಅವರದಾಗಿದದ್ದ ರಿಂದಲೂ ಅವರು ದೇವರ ಮನೆಯ ಸುತ್ತಲೂ ವಾಸ ವಾಗಿದ್ದರು.
28ಸೇವೆಯ ಪಾತ್ರೆಗಳನ್ನು ಒಳಕ್ಕೆ ಲೆಕ್ಕದ ಪ್ರಕಾರ ತರುವದಕ್ಕೂ ಅವರಲ್ಲಿ ಕೆಲವರು ಅವುಗಳ ಮೇಲೆ ನೇಮಕವಾಗಿದ್ದರು.
29ಅವರಲ್ಲಿ ಕೆಲವರು ಸಾಮಾನುಗಳನ್ನೂ ಪರಿಶುದ್ಧಸ್ಥಾನದಲ್ಲಿರುವ ಎಲ್ಲಾ ಸಾಮಾನುಗಳನ್ನೂ ನಯವಾದ ಹಿಟ್ಟನ್ನೂ ದ್ರಾಕ್ಷಾ ರಸವನ್ನೂ ಎಣ್ಣೆಯನ್ನೂ ಸಾಂಬ್ರಾಣಿಯನ್ನೂ ಸುಗಂಧದ್ರವ್ಯಗಳನ್ನೂ ಕಾಯಲು ನೇಮಿಸಲ್ಪಟ್ಟಿದ್ದರು.
30ಯಾಜಕರ ಕುಮಾರರಲ್ಲಿ ಕೆಲವರು ಸುಗಂಧಗಳಿಂದ ತೈಲವನ್ನು ಮಾಡಿದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ