೧ ಅರಸುಗಳು 8:23

ಇಸ್ರಾಯೇಲಿನ ದೇವರಾದ ಕರ್ತನೇ, ಮೇಲಿರುವ ಆಕಾಶದಲ್ಲಾದರೂ ಕೆಳಗಿರುವ ಭೂಮಿ ಯಲ್ಲಾದರೂ ನಿನ್ನ ಹಾಗೆ ದೇವರು ಯಾರೂ ಇಲ್ಲ. ಸಂಪೂರ್ಣವಾದ ಹೃದಯದಿಂದ ನಡೆಯುವ ನಿನ್ನ ಸೇವಕರ ಒಡಂಬಡಿಕೆಯನ್ನೂ ಕೃಪೆಯನ್ನೂ ನೆರವೇರಿ ಸುವಾತನೇ,

ಸಂದರ್ಭದೊಂದಿಗೆ ಓದಿ · ೧ ಅರಸುಗಳು 8

21ಇದಲ್ಲದೆ ಕರ್ತನು ನಮ್ಮ ಪಿತೃಗಳನ್ನು ಐಗುಪ್ತದೇಶದಿಂದ ಬರ ಮಾಡಿದಾಗ ಅವನ ಸಂಗಡ ಮಾಡಿದ ಒಡಂಬಡಿ ಕೆಯು ಇರುವ ಮಂಜೂಷಕ್ಕೋಸ್ಕರ ಸ್ಥಳವನ್ನು ಮಾಡಿಸಿ ದೆನು ಅಂದನು.

22ಆಗ ಸೊಲೊಮೋನನು ಇಸ್ರಾಯೇಲಿನ ಸಭೆ ಯವರ ಸಮ್ಮುಖದಲ್ಲಿ ದೇವರ ಬಲಿಪೀಠದ ಮುಂದೆ ನಿಂತು ಆಕಾಶದ ಕಡೆಗೆ ತನ್ನ ಕೈಗಳನ್ನು ಎತ್ತಿ ಹೇಳಿದ್ದೇ ನಂದರೆ--

23ಇಸ್ರಾಯೇಲಿನ ದೇವರಾದ ಕರ್ತನೇ, ಮೇಲಿರುವ ಆಕಾಶದಲ್ಲಾದರೂ ಕೆಳಗಿರುವ ಭೂಮಿ ಯಲ್ಲಾದರೂ ನಿನ್ನ ಹಾಗೆ ದೇವರು ಯಾರೂ ಇಲ್ಲ. ಸಂಪೂರ್ಣವಾದ ಹೃದಯದಿಂದ ನಡೆಯುವ ನಿನ್ನ ಸೇವಕರ ಒಡಂಬಡಿಕೆಯನ್ನೂ ಕೃಪೆಯನ್ನೂ ನೆರವೇರಿ ಸುವಾತನೇ,

24ನಿನ್ನ ಸೇವಕನಾದಂಥ ನನ್ನ ತಂದೆ ಯಾದ ದಾವೀದನಿಗೆ ವಾಗ್ದಾನಮಾಡಿ ನೆರವೇರಿಸಿದಾ ತನೇ,

25ನೀನು ನಿನ್ನ ಬಾಯಿಂದ ಹೇಳಿದ್ದನ್ನು ಇಂದಿನ ಪ್ರಕಾರವೇ ನಿನ್ನ ಕೈಯಿಂದ ನೆರವೇರಿಸಿದ ಕಾರಣ ಈಗ ಇಸ್ರಾಯೇಲಿನ ದೇವರಾದ ಕರ್ತನೇ, ನಿನ್ನ ಮಕ್ಕಳು ತಮ್ಮ ಮಾರ್ಗಕ್ಕೆ ಜಾಗ್ರತೆಯಾಗಿದ್ದು ನೀನು ನನ್ನ ಮುಂದೆ ನಡೆದ ಪ್ರಕಾರ ಅವರು ನನ್ನ ಮುಂದೆ ನಡೆದರೆ ಇಸ್ರಾಯೇಲಿನ ಸಿಂಹಾಸನದ ಮೇಲೆ ನನ್ನ ಸಮ್ಮುಖದಲ್ಲಿ ತಪ್ಪದೆ ಕುಳಿತುಕೊಳ್ಳುವಂತೆ ಮಾಡುವೆನು ಎಂದು ನೀನು ನನ್ನ ತಂದೆಯೂ, ನಿನ್ನ ಸೇವಕನಾದ ದಾವೀದನಿಗೆ ಹೇಳಿದ ಮಾತು ನೆರವೇರಿಸು.

೧ ಅರಸುಗಳು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी