ರೋಮಾಪುರದವರಿಗೆ 1:29

ಹೀಗೆ ಅವರು ಸಕಲ ಅನೀತಿಯಿಂದಲೂ ಜಾರತ್ವ ದುರ್ಮಾರ್ಗತನ ದುರಾಶೆ ದುಷ್ಟತ್ವ ಇವುಗಳಿಂದಲೂ ತುಂಬಿದವರಾಗಿ ಹೊಟ್ಟೇಕಿಚ್ಚು ಕೊಲೆ ವಿವಾದ ಮೋಸ ತುಂಬಿದವರೂ ಅತಿಉಗ್ರತೆಯಿಂದ ತುಂಬಿದವರೂ ಪಿಸುಗುಟ್ಟುವ ವರೂ

ಸಂದರ್ಭದೊಂದಿಗೆ ಓದಿ · ರೋಮಾಪುರದವರಿಗೆ 1

27ಅದರಂತೆ ಗಂಡಸರೂ ಸ್ವಾಭಾವಿಕ ಸ್ತ್ರೀ ಭೋಗವನ್ನು ಬಿಟ್ಟು ಒಬ್ಬರಮೇಲೊಬ್ಬರು ತಮ್ಮ ಕಾಮಾತುರದಿಂದ ತಾಪಪಡುತ್ತಾ ಗಂಡಸರ ಸಂಗಡ ಗಂಡಸರು ಅಯೋಗ್ಯವಾದದ್ದನ್ನು ಮಾಡುತ್ತಾ ತಮ್ಮ ತಪ್ಪಿಗೆ ತಕ್ಕ ಪ್ರತಿಫಲವನ್ನು ತಮ್ಮಲ್ಲಿ ಹೊಂದಿದರು.

28ಇದಲ್ಲದೆ ಅವರು ತಮ್ಮ ತಿಳುವಳಿಕೆಯಿಂದ ದೇವರನ್ನು ಸ್ಮರಿಸುವದಕ್ಕೆ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಮಾಡಬಾರದವುಗಳನ್ನು ಮಾಡು ವಂತೆ ಅನಿಷ್ಟಭಾವಕ್ಕೆ ಒಪ್ಪಿಸಿದನು.

29ಹೀಗೆ ಅವರು ಸಕಲ ಅನೀತಿಯಿಂದಲೂ ಜಾರತ್ವ ದುರ್ಮಾರ್ಗತನ ದುರಾಶೆ ದುಷ್ಟತ್ವ ಇವುಗಳಿಂದಲೂ ತುಂಬಿದವರಾಗಿ ಹೊಟ್ಟೇಕಿಚ್ಚು ಕೊಲೆ ವಿವಾದ ಮೋಸ ತುಂಬಿದವರೂ ಅತಿಉಗ್ರತೆಯಿಂದ ತುಂಬಿದವರೂ ಪಿಸುಗುಟ್ಟುವ ವರೂ

30ಚಾಡಿಹೇಳುವವರೂ ದೇವರನ್ನು ಹಗೆ ಮಾಡುವವರೂ ಧಿಕ್ಕರಿಸುವವರೂ ಅಹಂಕಾರಿಗಳೂ ಉಬ್ಬಿಕೊಳ್ಳುವವರೂ ಕೆಟ್ಟವುಗಳನ್ನು ಕಲ್ಪಿಸುವವರೂ ತಂದೆತಾಯಿಗಳಿಗೆ ಅವಿಧೇಯರೂ

31ತಿಳುವಳಿಕೆಯಿಲ್ಲ ದವರೂ ಪ್ರಮಾಣಕ್ಕೆ ತಪ್ಪುವವರೂ ಸ್ವಾಭಾವಿಕವಾದ ಮಮತೆಯಿಲ್ಲದವರೂ ಸಮಾಧಾನವಾಗದವರೂ ಕರುಣೆಯಿಲ್ಲದವರೂ ಆದರು.

ರೋಮಾಪುರದವರಿಗೆ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी