ಅರಣ್ಯಕಾಂಡ 12:12

ತನ್ನ ತಾಯಿಯ ಗರ್ಭದಿಂದ ಹೊರಗೆ ಬಂದಾಗಲೇ ಅರ್ಧ ಮಾಂಸ ಕೊಳೆತುಹೋದಂಥ ಶವದಂತೆ ಆಕೆಯನ್ನು ಇರಗೊಡಿಸಬೇಡ ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.

ಸಂದರ್ಭದೊಂದಿಗೆ ಓದಿ · ಅರಣ್ಯಕಾಂಡ 12

10ಆ ಮೇಘವು ಗುಡಾರದ ಮೇಲಿನಿಂದ ತೊಲಗಿ ಹೋಯಿತು; ಆಗ ಇಗೋ, ಮಿರ್ಯಾಮಳು ಹಿಮದ ಹಾಗೆ ಕುಷ್ಠವುಳ್ಳವಳಾದಳು. ಆರೋನನು ಮಿರ್ಯಾಮಳ ಕಡೆಗೆ ನೋಡಿದಾಗ ಇಗೋ, ಅವಳು ಕುಷ್ಠರೋಗಿ ಯಾಗಿದ್ದಳು.

11ಆರೋನನು ಮೋಶೆಗೆ--ಅಯ್ಯೋ, ನನ್ನ ಒಡೆಯನೇ, ನಾವು ಪಾಪಮಾಡಿದೆವು, ಬುದ್ಧಿಯಿಲ್ಲದೆ ಮಾಡಿದ ಈ ಪಾಪವನ್ನು ನಮ್ಮ ಮೇಲೆ ಹಾಕಬೇಡ.

12ತನ್ನ ತಾಯಿಯ ಗರ್ಭದಿಂದ ಹೊರಗೆ ಬಂದಾಗಲೇ ಅರ್ಧ ಮಾಂಸ ಕೊಳೆತುಹೋದಂಥ ಶವದಂತೆ ಆಕೆಯನ್ನು ಇರಗೊಡಿಸಬೇಡ ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.

13ಆಗ ಮೋಶೆಯು ಕರ್ತನಿಗೆ ಕೂಗಿ--ಓ ದೇವರೇ, ಅವಳನ್ನು ಈಗ ಸ್ವಸ್ಥಮಾಡು ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.

14ಆಗ ಕರ್ತನು ಮೋಶೆಗೆ--ಆಕೆಯ ತಂದೆ ಆಕೆಯ ಮುಖದ ಮೇಲೆ ಉಗುಳಿದರೆ ಆಕೆಯು ಏಳು ದಿವಸ ನಾಚಿಕೊಳ್ಳುವದಿಲ್ಲವೋ? ಆಕೆಯು ಏಳು ದಿವಸ ಪಾಳೆಯದ ಹೊರಗೆ ಮರೆಯಾಗಿದ್ದು ತರುವಾಯ ಸೇರಿಸಲ್ಪಡಲಿ ಎಂದು ಹೇಳಿದನು.

ಅರಣ್ಯಕಾಂಡ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी