ಯಾಜಕಕಾಂಡ 23:10

ಇಸ್ರಾಯೇಲ್‌ ಮಕ್ಕಳೊಂದಿಗೆ ಮಾತ ನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನಾನು ನಿಮಗೆ ಕೊಡುವ ದೇಶದೊಳಕ್ಕೆ ನೀವು ಬಂದಾಗ ಮತ್ತು ಅಲ್ಲಿಯ ಸುಗ್ಗಿ (ಬೆಳೆ)ಯನ್ನು ಕೊಯಿದರೆ ನಿಮ್ಮ ಸುಗ್ಗಿಯ ಮೊದಲನೆಯ ಫಲಗಳ ಸಿವುಡನ್ನು ಯಾಜಕನ ಬಳಿಗೆ ತರಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 23

8ಆದರೆ ಏಳು ದಿವಸ ನೀವು ಕರ್ತನಿಗೆ ಬೆಂಕಿಯಿಂದ ಮಾಡಿದ ಬಲಿಯನ್ನು ಸಮರ್ಪಿಸಬೇಕು; ಏಳನೆಯ ದಿನದಲ್ಲಿ ಪರಿಶುದ್ಧ ಸಭಾ ಕೂಟವಿರುವದು; ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡಬಾರದು.

9ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿ ದ್ದೇನಂದರೆ--

10ಇಸ್ರಾಯೇಲ್‌ ಮಕ್ಕಳೊಂದಿಗೆ ಮಾತ ನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನಾನು ನಿಮಗೆ ಕೊಡುವ ದೇಶದೊಳಕ್ಕೆ ನೀವು ಬಂದಾಗ ಮತ್ತು ಅಲ್ಲಿಯ ಸುಗ್ಗಿ (ಬೆಳೆ)ಯನ್ನು ಕೊಯಿದರೆ ನಿಮ್ಮ ಸುಗ್ಗಿಯ ಮೊದಲನೆಯ ಫಲಗಳ ಸಿವುಡನ್ನು ಯಾಜಕನ ಬಳಿಗೆ ತರಬೇಕು.

11ಅದು ನಿಮಗೋಸ್ಕರ ಅಂಗೀಕಾರವಾಗುವಂತೆ ಅದನ್ನು ಕರ್ತನ ಸನ್ನಿಧಿಯಲ್ಲಿ ಆಡಿಸಬೇಕು; ಸಬ್ಬತ್ತಿನ ಮಾರನೆಯ ದಿನ ಯಾಜಕನು ಅದನ್ನು ಆಡಿಸಬೇಕು.

12ನೀವು ಸಿವುಡನ್ನು ಆಡಿಸುವ ದಿನದಲ್ಲಿ ಕರ್ತನಿಗೆ ದಹನಬಲಿಯಾಗಿ ಸಮರ್ಪಿಸು ವಂತೆ ಒಂದು ವರುಷದ ಮತ್ತು ದೋಷವಿಲ್ಲದ ಕುರಿ ಮರಿಯನ್ನು ಅರ್ಪಿಸಬೇಕು.

ಯಾಜಕಕಾಂಡ 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी