ನನ್ನ ಸಬ್ಬತ್ತುಗಳನ್ನು ನೀನು ಕೈಕೊಳ್ಳಬೇಕು; ನನ್ನ ಪವಿತ್ರ ಸ್ಥಳವನ್ನು ಭಯಭಕ್ತಿಯಿಂದ ಕಾಣಬೇಕು; ನಾನೇ ಕರ್ತನು.
28ಸತ್ತವರಿ ಗಾಗಿ ನಿಮ್ಮ ಶರೀರವನ್ನು ಕೊಯ್ದುಕೊಳ್ಳಬಾರದು, ನಿಮ್ಮ ಮೇಲೆ ಯಾವ ಚಿನ್ಹೆಗಳನ್ನೂ ಮುದ್ರಿಸಿಕೊಳ್ಳ ಬಾರದು; ನಾನೇ ಕರ್ತನು.
29ನಿನ್ನ ಮಗಳು ಸೂಳೆಯಾಗುವಂತೆ ವ್ಯಭಿಚಾರಕ್ಕೆ ಬಿಡಬೇಡ; ಬಿಟ್ಟರೆ ಅದರಿಂದ ದೇಶವು ಸೂಳೆತನಕ್ಕೆ ಒಳಪಟ್ಟು, ದೇಶವು ಎಲ್ಲಾ ಕೆಟ್ಟತನದಿಂದ ತುಂಬು ವದು.
30ನನ್ನ ಸಬ್ಬತ್ತುಗಳನ್ನು ನೀನು ಕೈಕೊಳ್ಳಬೇಕು; ನನ್ನ ಪವಿತ್ರ ಸ್ಥಳವನ್ನು ಭಯಭಕ್ತಿಯಿಂದ ಕಾಣಬೇಕು; ನಾನೇ ಕರ್ತನು.
31ಮಂತ್ರವಾದಿಗಳನ್ನು ಲಕ್ಷಿಸಬೇಡ, ಅಲ್ಲದೆ ಅವರಿಂದ ಹೊಲೆಯಾಗದಂತೆ ಮಾಟಗಾರ ರನ್ನು ಅನುಸರಿಸಬೇಡ; ನಿಮ್ಮ ದೇವರಾಗಿರುವ ಕರ್ತನು ನಾನೇ.
32ನರೇಕೂದಲಿನವನ ಮುಂದೆ ಎದ್ದು ನಿಂತು ಕೊಳ್ಳಬೇಕು; ಮುದುಕನ ಸಮ್ಮುಖವನ್ನು ಗೌರವಿಸು; ನಿನ್ನ ದೇವರಿಗೆ ಭಯಪಡಬೇಕು; ನಾನೇ ಕರ್ತನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ