ಕೂಡಲೆ ಸಹೋದರರು ಪೌಲನನ್ನು ಸಮುದ್ರದ ತನಕ ಸಾಗ ಕಳುಹಿಸಿದರು. ಆದರೆ ಸೀಲನೂ ತಿಮೊಥೆಯನೂ ಅಲ್ಲೇ ನಿಂತರು.
12ಆದದರಿಂದ ಅವರಲ್ಲಿ ಬಹಳ ಮಂದಿ ನಂಬಿದರು; ಇದಲ್ಲದೆ ಕುಲೀನರಾದ ಗ್ರೀಕ್ ಹೆಂಗಸರ ಲ್ಲಿಯೂ ಗಂಡಸರಲ್ಲಿಯೂ ಅನೇಕರು ನಂಬಿದರು.
13ಆದರೆ ಪೌಲನು ಬೆರೋಯದಲ್ಲಿಯೂ ದೇವರ ವಾಕ್ಯವನ್ನು ಸಾರುತ್ತಾನೆಂದು ಥೆಸಲೊನೀಕದ ಯೆಹೂ ದ್ಯರಿಗೆ ತಿಳಿದಾಗ ಅವರು ಅಲ್ಲಿಗೂ ಬಂದು ಜನರ ಗುಂಪುಗಳನ್ನು ರೇಗಿಸಿದರು.
14ಕೂಡಲೆ ಸಹೋದರರು ಪೌಲನನ್ನು ಸಮುದ್ರದ ತನಕ ಸಾಗ ಕಳುಹಿಸಿದರು. ಆದರೆ ಸೀಲನೂ ತಿಮೊಥೆಯನೂ ಅಲ್ಲೇ ನಿಂತರು.
15ಪೌಲನನ್ನು ಸಾಗಕಳುಹಿಸಿದವರು ಅವನನ್ನು ಅಥೇನೆಯವರೆಗೂ ಕರೆದುಕೊಂಡು ಹೋಗಿ ಸೀಲ ನನ್ನೂ ತಿಮೊಥೆಯನನ್ನೂ ಬೇಗ ತನ್ನ ಬಳಿಗೆ ಬರ ಬೇಕೆಂಬ ಅಪ್ಪಣೆಯನ್ನು ಅವನಿಂದ ಹೊಂದಿ ಹೊರಟುಹೋದರು.
16ಪೌಲನು ಅವರಿಗೋಸ್ಕರ ಅಥೇನೆಯಲ್ಲಿ ಕಾದುಕೊಂಡಿರುವಾಗ ಆ ಪಟ್ಟಣವೆಲ್ಲಾ ವಿಗ್ರಹಾರಾ ಧನೆಯಿಂದ ತುಂಬಿರುವದನ್ನು ನೋಡಿ ಅವನ ಮನಸ್ಸು ಅವನೊಳಗೆ ಕುದಿಯಿತು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ