ನೀವು ನಿಮ್ಮಲ್ಲಿ ಪಕ್ಷಪಾತಿಗಳಾಗಿ ಕೆಟ್ಟ ಆಲೋಚನೆಗಳ ನ್ಯಾಯಾಧಿಪತಿ ಗಳಾಗಿದ್ದೀರಲ್ಲವೇ?
2ಹೇಗಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರವನ್ನೂ ಅಂದವಾದ ವಸ್ತ್ರವನ್ನೂ ಹಾಕಿಕೊಂಡು ನಿಮ್ಮ ಸಭೆ ಯೊಳಗೆ ಬರಲು ಮತ್ತು ಒಬ್ಬ ಬಡ ಮನುಷ್ಯನು ಸಹ ಹೀನವಾದ ಬಟ್ಟೆ ಹಾಕಿಕೊಂಡು ಬರಲು
3ನೀವು ಹೊಳೆಯುವ ವಸ್ತ್ರಗಳನ್ನು ಧರಿಸಿಕೊಂಡಿರುವವನನ್ನು ಗೌರವಿಸಿ ಅವನಿಗೆ--ನೀನು ಇಲ್ಲಿ ಈ ಒಳ್ಳೇ ಸ್ಥಳದಲ್ಲಿ ಕೂತುಕೋ ಎಂತಲೂ ಆ ಬಡವನಿಗೆ--ನೀನು ಅಲ್ಲಿ ನಿಂತುಕೋ ಇಲ್ಲವೆ ಇಲ್ಲಿ ನನ್ನ ಕಾಲ್ಮಣೆಯ ಹತ್ತಿರ ಕೂತುಕೋ ಎಂತಲೂ ಹೇಳಿದರೆ
4ನೀವು ನಿಮ್ಮಲ್ಲಿ ಪಕ್ಷಪಾತಿಗಳಾಗಿ ಕೆಟ್ಟ ಆಲೋಚನೆಗಳ ನ್ಯಾಯಾಧಿಪತಿ ಗಳಾಗಿದ್ದೀರಲ್ಲವೇ?
5ನನ್ನ ಪ್ರಿಯ ಸಹೋದರರೇ, ಕೇಳಿರಿ; ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರಾಗಿಯೂ ತನ್ನನ್ನು ಪ್ರೀತಿಸುವವ ರಿಗೆ ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯ ರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?
6ನೀವಾದರೋ ಬಡವರನ್ನು ಅವಮಾನಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನಗಳ ಮುಂದೆ ಎಳೆದು ಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ?
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ