ಯಾಜಕಕಾಂಡ 25:30

ಆದರೆ ವರುಷವು ಪೂರ್ಣವಾಗುವದರೊಳಗಾಗಿ ಅದು ಬಿಡುಗಡೆಯಾಗದಿದ್ದರೆ ಗೋಡೆಯ ಪಟ್ಟಣದೊಳಗಿರುವ ಆ ಮನೆಯು ಅದನ್ನು ಕೊಂಡುಕೊಂಡವನಿಗೆ ಅವನ ತಲತಲಾಂತರಕ್ಕೂ ಸ್ಥಿರವಾಗಿಡಲ್ಪಡಬೇಕು; ಸಂಭ್ರಮದ ವರುಷದಲ್ಲಿ ಅದು ಬಿಡುಗಡೆಯಾಗ ಬಾರದು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 25

28ತಿರಿಗಿ ಸಲ್ಲಿಸುವದಕ್ಕೆ ಅವನಿಗೆ ಆಗದಿದ್ದರೆ ಅವನು ಮಾರಿದ್ದು ಸಂಭ್ರಮದ ವರುಷದ ವರೆಗೆ ಕೊಂಡುಕೊಂಡವನ ಕೈಯಲ್ಲಿ ಇರಬೇಕು; ಸಂಭ್ರಮದ ವರುಷದಲ್ಲಿ ಅದು ಬಿಡುಗಡೆ ಯಾಗಬೇಕು, ಅವನು ತನ್ನ ಸ್ವಾಸ್ತ್ಯಕ್ಕೆ ಹಿಂದಿರುಗಬೇಕು.

29ಇದಲ್ಲದೆ ಒಬ್ಬನು ಗೋಡೆಯುಳ್ಳ ಪಟ್ಟಣದ ಲ್ಲಿರುವ ನಿವಾಸದ ಮನೆಯನ್ನು ಮಾರಿದರೆ ಅದನ್ನು ಮಾರಿದ ಒಂದು ಪೂರ್ಣ ವರುಷದೊಳಗಾಗಿ ಅದನ್ನು ಬಿಡುಗಡೆ ಮಾಡಬೇಕು; ಒಂದು ಪೂರ್ಣ ವರುಷ

30ಆದರೆ ವರುಷವು ಪೂರ್ಣವಾಗುವದರೊಳಗಾಗಿ ಅದು ಬಿಡುಗಡೆಯಾಗದಿದ್ದರೆ ಗೋಡೆಯ ಪಟ್ಟಣದೊಳಗಿರುವ ಆ ಮನೆಯು ಅದನ್ನು ಕೊಂಡುಕೊಂಡವನಿಗೆ ಅವನ ತಲತಲಾಂತರಕ್ಕೂ ಸ್ಥಿರವಾಗಿಡಲ್ಪಡಬೇಕು; ಸಂಭ್ರಮದ ವರುಷದಲ್ಲಿ ಅದು ಬಿಡುಗಡೆಯಾಗ ಬಾರದು.

31ಆದರೆ ಸುತ್ತಲೂ ಗೋಡೆಗಳಿಲ್ಲದ ಹಳ್ಳಿಗಳಲ್ಲಿಯ ಮನೆಗಳು ದೇಶದ ಭೂಮಿಯೊಂದಿಗೆ ಲೆಕ್ಕಿಸಲ್ಪಡಬೇಕು. ಅವುಗಳಿಗೆ ಬಿಡುಗಡೆ ಇರಬೇಕು; ಸಂಭ್ರಮ ವರುಷದಲ್ಲಿ ಅವು ಬಿಡುಗಡೆಯಾಗಬೇಕು.

32ಇದಲ್ಲದೆ ಲೇವಿಯರ ಪಟ್ಟಣಗಳ ವಿಷಯವಾ ಗಿಯೂ ಅವರ ಸ್ವಾಸ್ತ್ಯವಾಗಿರುವ ಪಟ್ಟಣಗಳಲ್ಲಿನ ಮನೆಗಳ ವಿಷಯವಾಗಿಯೂ ಲೇವಿಯರು ಯಾವ ಸಮಯದಲ್ಲಿಯಾದರೂ ಬಿಡಿಸಿಕೊಳ್ಳಬಹುದು.

ಯಾಜಕಕಾಂಡ 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी