ಅಪೊಸ್ತಲರ ಕೃತ್ಯಗಳು 21:3

ನಾವು ಕುಪ್ರವನ್ನು ಕಂಡು ಅದನ್ನು ಎಡಗಡೆಗೆ ಬಿಟ್ಟು ಸಿರಿಯದ ಕಡೆಗೆ ಸಾಗಿ ತೂರ್‌ಗೆ ಬಂದು ಇಳಿದೆವು. ಹಡಗು ಅಲ್ಲಿ ಸರಕನ್ನು ಇಳಿಸ ಬೇಕಾಗಿತ್ತು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 21

1ಇದಾದ ಮೇಲೆ ನಾವು ಅವರನ್ನು ಬಿಟ್ಟು ಸಮುದ್ರಪ್ರಯಾಣವಾಗಿ ನೆಟ್ಟಗೆ ಕೋಸ್‌ಗೆ ಬಂದೆವು. ಮರುದಿನ ರೋದಕ್ಕೆ ಹೋಗಿ ಅಲ್ಲಿಂದ ಪತರಕ್ಕೆ ಸೇರಿದೆವು.

2ಅಲ್ಲಿ ಫೊಯಿನೀಕೆಗೆ ಹೋಗುವ ಹಡಗನ್ನು ಕಂಡು ಅದನ್ನು ಹತ್ತಿ ಪ್ರಯಾಣವನ್ನು ಸಾಗಿಸಿದೆವು.

3ನಾವು ಕುಪ್ರವನ್ನು ಕಂಡು ಅದನ್ನು ಎಡಗಡೆಗೆ ಬಿಟ್ಟು ಸಿರಿಯದ ಕಡೆಗೆ ಸಾಗಿ ತೂರ್‌ಗೆ ಬಂದು ಇಳಿದೆವು. ಹಡಗು ಅಲ್ಲಿ ಸರಕನ್ನು ಇಳಿಸ ಬೇಕಾಗಿತ್ತು.

4ಅಲ್ಲಿ ನಾವು ಶಿಷ್ಯರನ್ನು ಕಂಡು ಏಳು ದಿವಸ ಇದ್ದೆವು; ಪೌಲನು ಯೆರೂಸ ಲೇಮಿಗೆ ಹೋಗಬಾರದೆಂದು ಅವರು ಆತ್ಮನ ಮುಖಾಂತರ ಅವನಿಗೆ ಹೇಳಿದರು.

5ಆ ದಿವಸಗಳು ಕಳೆದ ಮೇಲೆ ನಾವು ಹೊರಟು ಹೋಗುತ್ತಿರುವಾಗ ಅವರು ತಮ್ಮ ಹೆಂಡತಿಯರು ಮಕ್ಕಳ ಸಹಿತವಾಗಿ ನಮ್ಮನ್ನು ಪಟ್ಟಣದ ಹೊರಗೆ ಸಾಗಕಳುಹಿಸಿದರು; ನಾವು ಸಮುದ್ರದ ತೀರದಲ್ಲಿ ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು.

ಅಪೊಸ್ತಲರ ಕೃತ್ಯಗಳು 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी