೧ ಅರಸುಗಳು 8:28

ಆದರೆ ನನ್ನ ದೇವರಾದ ಕರ್ತನೇ, ನಿನ್ನ ಸೇವಕನ ಪ್ರಾರ್ಥನೆಗೂ ವಿಜ್ಞಾಪನೆಗೂ ನಿನ್ನ ಸೇವಕನು ನಿನ್ನ ಮುಂದೆ ಪ್ರಾರ್ಥಿಸುವ ಪ್ರಾರ್ಥನೆಯ ಕೂಗನ್ನೂ ಕೇಳು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 8

26ಈಗ ಓ ಇಸ್ರಾಯೇಲಿನ ದೇವರೇ, ನನ್ನ ತಂದೆಯಾದ ನಿನ್ನ ಸೇವಕನಾದ ದಾವೀದನಿಗೆ ಹೇಳಿದ ವಾಕ್ಯವು ದೃಢವಾಗಲಿ.

27ಆದರೆ ದೇವರು ನಿಶ್ಚಯವಾಗಿ ಭೂಮಿಯ ಮೇಲೆ ವಾಸವಾಗಿರುವನೋ? ಇಗೋ, ಆಕಾಶಗಳೂ ಆಕಾಶಾ ಕಾಶಗಳೂ ನಿನ್ನನ್ನು ಹಿಡಿಯಲಾರವು; ಹಾಗಾದರೆ ನಾನು ಕಟ್ಟಿಸಿದ ಈ ಮಂದಿರವು ಹಿಡಿಯುವದು ಹೇಗೆ?

28ಆದರೆ ನನ್ನ ದೇವರಾದ ಕರ್ತನೇ, ನಿನ್ನ ಸೇವಕನ ಪ್ರಾರ್ಥನೆಗೂ ವಿಜ್ಞಾಪನೆಗೂ ನಿನ್ನ ಸೇವಕನು ನಿನ್ನ ಮುಂದೆ ಪ್ರಾರ್ಥಿಸುವ ಪ್ರಾರ್ಥನೆಯ ಕೂಗನ್ನೂ ಕೇಳು.

29ನಿನ್ನ ಸೇವಕನು ಈ ಸ್ಥಳದಲ್ಲಿ ಮಾಡುವ ಪ್ರಾರ್ಥನೆಯನ್ನು ನೀನು ಕೇಳುವ ಹಾಗೆ ಅಲ್ಲಿ ನನ್ನ ಹೆಸರಿರುವದೆಂದು ನೀನು ಹೇಳಿದ ಸ್ಥಳವಾದ ಈ ಮಂದಿರದ ಮೇಲೆ ರಾತ್ರಿ ಹಗಲು ನಿನ್ನ ಕಟಾಕ್ಷವಿರಲಿ.

30ನಿನ್ನ ಸೇವಕನ ವಿಜ್ಞಾಪನೆಯನ್ನೂ ನಿನ್ನ ಜನರಾದ ಇಸ್ರಾಯೇಲ್ಯರ ವಿಜ್ಞಾಪನೆಯನ್ನೂ ಕೇಳು. ಅವರು ಈ ಸ್ಥಳದ ಕಡೆಗೆ ಪ್ರಾರ್ಥಿಸುವಾಗ ನೀನು ಆಕಾಶದಲ್ಲಿ ವಾಸಮಾಡುವ ಸ್ಥಳದಲ್ಲಿ ಕೇಳಿ ಮನ್ನಿಸು.

೧ ಅರಸುಗಳು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी