ನ್ಯಾಯಸ್ಥಾಪಕರು 3:9

ತರುವಾಯ ಇಸ್ರಾಯೇಲ್‌ ಮಕ್ಕಳು ಕರ್ತನನ್ನು ಕೂಗಿದಾಗ ಕರ್ತನು ಅವರನ್ನು ರಕ್ಷಿಸುವ ರಕ್ಷಕನನ್ನು ಅಂದರೆ ಕಾಲೇಬನ ತಮ್ಮನಾದ ಕೆನಜನ ಮಗನಾದ ಒತ್ನೀಯೇಲನನ್ನು ಎಬ್ಬಿಸಿದನು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 3

7ಇಸ್ರಾಯೇಲ್‌ ಮಕ್ಕಳು ಕರ್ತನ ಮುಂದೆ ಕೆಟ್ಟತನ ಮಾಡಿ ತಮ್ಮ ದೇವರಾದ ಕರ್ತನನ್ನು ಮರೆತು ಬಾಳ ನನ್ನೂ ತೋಪುಗಳನ್ನೂ ಸೇವಿಸಿದರು.

8ಆದದರಿಂದ ಕರ್ತನು ಇಸ್ರಾಯೇಲ್ಯರ ಮೇಲೆ ಕೋಪಗೊಂಡು ಅವರನ್ನು ಮೆಸೊಪೋತಾಮ್ಯದ ಅರಸನಾದ ಕೂಷನ್‌ ರಿಷಾತಯಿಮ್‌ ಕೈಗೆ ಮಾರಿಬಿಟ್ಟನು. ಇಸ್ರಾಯೇಲ್‌ ಮಕ್ಕಳು ಕೂಷನ್‌ರಿಷಾತಯಿಮ್‌ನ್ನು ಎಂಟು ವರುಷ ಸೇವಿಸಿದರು.

9ತರುವಾಯ ಇಸ್ರಾಯೇಲ್‌ ಮಕ್ಕಳು ಕರ್ತನನ್ನು ಕೂಗಿದಾಗ ಕರ್ತನು ಅವರನ್ನು ರಕ್ಷಿಸುವ ರಕ್ಷಕನನ್ನು ಅಂದರೆ ಕಾಲೇಬನ ತಮ್ಮನಾದ ಕೆನಜನ ಮಗನಾದ ಒತ್ನೀಯೇಲನನ್ನು ಎಬ್ಬಿಸಿದನು.

10ಅವನ ಮೇಲೆ ಕರ್ತನ ಆತ್ಮವು ಬಂದದ್ದರಿಂದ ಅವನು ಇಸ್ರಾಯೇಲ್ಯರಿಗೆ ನ್ಯಾಯತೀರಿಸಿದನು. ಯುದ್ಧಮಾಡು ವದಕ್ಕೆ ಹೊರಟಾಗ ಕರ್ತನು ಅವನ ಕೈಗೆ ಮೆಸೊ ಪೊತಾಮ್ಯದ ಅರಸನಾದ ಕೂಷನ್‌ರಿಷಾತಮನ್ನು ಒಪ್ಪಿಸಿಕೊಟ್ಟನು. ಅವನ ಕೈ ಕೂಷನ್‌ರಿಷಾತಯಿಮಿನ ಮೇಲೆ ಬಲವಾಯಿತು.

11ದೇಶವು ನಾಲ್ವತ್ತು ವರುಷದ ವರೆಗೆ ವಿಶ್ರಾಂತಿಯಿಂದಿತ್ತು. ಕೆನಜನ ಮಗನಾದ ಒತ್ನೀಯೇಲನು ಸತ್ತನು.

ನ್ಯಾಯಸ್ಥಾಪಕರು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी