೧ ಸಮುವೇಲನು 25:9

ದಾವೀದನ ಯುವಕರು ಬಂದು ಈ ಮಾತುಗಳನ್ನೆಲ್ಲಾ ದಾವೀದನ ಹೆಸರಿನಲ್ಲಿ ನಾಬಾಲನಿಗೆ ಹೇಳಿ ಮೌನವಾದರು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 25

7ನಿನಗೆ ಕುರಿಗಳ ಉಣ್ಣೆಯನ್ನು ಕತ್ತರಿಸುವವರು ಇದ್ದಾರೆಂದು ನಾನು ಕೇಳಿದ್ದೇನೆ. ಆದರೆ ನಮ್ಮ ಸಂಗಡವಿದ್ದ ನಿನ್ನ ಕುರಿ ಕಾಯುವವರು ಕರ್ಮೆಲಿ ನಲ್ಲಿ ಇದ್ದ ದಿವಸಗಳೆಲ್ಲಾ ನಾವು ಅವರನ್ನು ತೊಂದರೆ ಪಡಿಸಲಿಲ್ಲ; ಅವರು ಒಂದನ್ನಾದರೂ ಕಳಕೊಳ್ಳಲಿಲ್ಲ;

8ನಿನ್ನ ಯೌವನಸ್ಥರನ್ನು ಕೇಳು, ಅವರೇ ನಿನಗೆ ಹೇಳುವರು. ಆದದರಿಂದ ಈಗ ಈ ಯುವಕರಿಗೆ ನಿನ್ನ ದೃಷ್ಟಿಯಲ್ಲಿ ದಯೆದೊರಕಲಿ; ಒಳ್ಳೇ ದಿವಸದಲ್ಲಿ ನಾವು ಬಂದೆವು. ನಿನ್ನ ಕೈಯಲ್ಲಿ ದೊರಕುವದನ್ನು ನಿನ್ನ ಸೇವಕರಿಗೂ ನಿನ್ನ ಕುಮಾರನಾದ ದಾವೀದನಿಗೂ ದಯಪಾಲಿಸು ಅಂದನು.

9ದಾವೀದನ ಯುವಕರು ಬಂದು ಈ ಮಾತುಗಳನ್ನೆಲ್ಲಾ ದಾವೀದನ ಹೆಸರಿನಲ್ಲಿ ನಾಬಾಲನಿಗೆ ಹೇಳಿ ಮೌನವಾದರು.

10ನಾಬಾಲನು ದಾವೀದನ ಸೇವಕರಿಗೆ ಪ್ರತ್ಯುತ್ತರವಾಗಿ--ದಾವೀದನು ಯಾರು? ಇಷಯನ ಮಗನು ಯಾರು? ತಮ್ಮ ಯಜಮಾನನನ್ನು ಬಿಟ್ಟು ಅಗಲಿ ಹೋಗುವ ಸೇವಕರು ಈ ದಿವಸಗಳಲ್ಲಿ ಅನೇಕರು ಇದ್ದಾರೆ.

11ನಾನು ನನ್ನ ರೊಟ್ಟಿಯನ್ನೂ ನೀರನ್ನೂ ಉಣ್ಣೆಯನ್ನು ಕತ್ತರಿಸುವವ ರಿಗೋಸ್ಕರ ನಾನು ಸಿದ್ಧಮಾಡಿಸಿದ ಮಾಂಸವನ್ನೂ ತೆಗೆದು ಎಲ್ಲಿಯವರೆಂದು ನಾನರಿಯದ ಮನುಷ್ಯರಿಗೆ ಕೊಡುವೆನೋ ಅಂದನು.

೧ ಸಮುವೇಲನು 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी