೧ ಸಮುವೇಲನು 30:20

ಇದಲ್ಲದೆ ದಾವೀದನು ಅವರ ಎಲ್ಲಾ ಕುರಿ ಪಶುಗಳ ಮಂದೆಗ ಳನ್ನು ಹಿಡಿದನು; ಅವುಗಳನ್ನು ಇವರು ತಮ್ಮ ಪಶು ಗಳಿಗೆ ಮುಂದಾಗಿ ಹೊಡಕೊಂಡು ಹೋಗುತ್ತಾಇವು ದಾವೀದನ ಕೊಳ್ಳೆ ಎಂದು ಅಂದುಕೊಂಡರು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 30

18ಅಮಾ ಲೇಕ್ಯರು ತಕ್ಕೊಂಡು ಹೋದದ್ದನ್ನೆಲ್ಲಾ ದಾವೀದನು ಬಿಡಿಸಿಕೊಂಡನು. ತನ್ನ ಇಬ್ಬರು ಹೆಂಡತಿಯರನ್ನು ದಾವೀದನು ಬಿಡಿಸಿಕೊಂಡನು.

19ಅವರು ತಕ್ಕೊಂಡು ಹೋದ ಕಿರಿಯರ ಹಿರಿಯರಲ್ಲಾದರೂ ಕುಮಾರ ಕುಮಾರ್ತೆಯರಲ್ಲಾದರೂ ಕೊಳ್ಳೆಯಾದ ಯಾವ ವಸ್ತು ಗಳಲ್ಲಾದರೂ ಒಂದೂ ಕೊರತೆ ಇಲ್ಲದ ಹಾಗೆ ದಾವೀ ದನು ಎಲ್ಲವನ್ನೂ ತಿರಿಗಿ ತಕ್ಕೊಂಡನು.

20ಇದಲ್ಲದೆ ದಾವೀದನು ಅವರ ಎಲ್ಲಾ ಕುರಿ ಪಶುಗಳ ಮಂದೆಗ ಳನ್ನು ಹಿಡಿದನು; ಅವುಗಳನ್ನು ಇವರು ತಮ್ಮ ಪಶು ಗಳಿಗೆ ಮುಂದಾಗಿ ಹೊಡಕೊಂಡು ಹೋಗುತ್ತಾಇವು ದಾವೀದನ ಕೊಳ್ಳೆ ಎಂದು ಅಂದುಕೊಂಡರು.

21ದಾವೀದನ ಹಿಂದೆ ಬರಲಾರದೆ ದಣಿದಿದ್ದರಿಂದ ಬೆಸೋರಿನ ಹಳ್ಳದ ಬಳಿಯಲ್ಲಿ ಬಿಟ್ಟುಹೋಗಿದ್ದ ಇನ್ನೂರು ಜನರ ಬಳಿಗೆ ದಾವೀದನು ಬಂದಾಗ ಅವರು ದಾವೀದನನ್ನೂ ಅವನ ಸಂಗಡ ಇದ್ದ ಜನ ರನ್ನೂ ಎದುರುಗೊಳ್ಳಲು ಹೋದರು. ದಾವೀದನು ಆ ಜನರ ಬಳಿಗೆ ಸೇರಿ ಅವರ ಕ್ಷೇಮಸಮಾಚಾರವನ್ನು ಕೇಳಿದನು.

22ಆಗ ದಾವೀದನ ಸಂಗಡ ಬಂದ ಜನರಲ್ಲಿ ಕೆಟ್ಟವರಾದ ಬೆಲಿಯಾಳನ ಜನರು--ಅವರು ನಮ್ಮ ಸಂಗಡ ಬಾರದೆ ಇದದ್ದರಿಂದ ನಾವು ತಿರಿಗಿ ತಕ್ಕೊಂಡು ಬಂದ ಕೊಳ್ಳೆಯ ವಸ್ತುಗಳಲ್ಲಿ ಅವರಿಗೆ ಒಂದನ್ನೂ ಕೊಡುವದಿಲ್ಲ; ಪ್ರತಿಯೊಬ್ಬನು ತನ್ನ ತನ್ನ ಹೆಂಡತಿ ಮಕ್ಕಳನ್ನು ಮಾತ್ರವೇ ಕರಕೊಂಡು ಹೋಗಲಿ ಅಂದರು.

೧ ಸಮುವೇಲನು 30 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी