ಯೆಹೆಜ್ಕೇಲನು 18:25

ಆದರೆ ನೀವು, ಕರ್ತನ ಮಾರ್ಗವು ಸರಿಯಲ್ಲ ಅನ್ನುತ್ತೀರಿ; ಓ ಇಸ್ರಾ ಯೇಲಿನ ಮನೆಯವರೇ, ಈಗ ಕೇಳಿರಿ, ನನ್ನ ಮಾರ್ಗವು ಸಮವಲ್ಲವೇ? ನಿಮ್ಮ ಮಾರ್ಗಗಳು ಸಮವಲ್ಲದವು ಗಳೇ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 18

23ದುಷ್ಟನು ಸಾಯುವದರಲ್ಲಿ ನನಗೆ ಸ್ವಲ್ಪವಾದರೂ ಸಂತೋಷವಿ ರುವದೋ ಎಂದು ದೇವರಾದ ಕರ್ತನು ಹೇಳುತ್ತಾನೆ; ಅವನು ತನ್ನ ನಡತೆಗಳಿಂದ ಹಿಂತಿರುಗಿಕೊಂಡು ಬದು ಕಿದರೆ ನನಗೆ ಸಂತೋಷವಲ್ಲವೇ?

24ಆದರೆ ನೀತಿ ವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡಿ ದುಷ್ಟನು ಮಾಡುವ ಎಲ್ಲಾ ಅಸಹ್ಯವಾದವುಗಳ ಹಾಗೆ ಮಾಡಿದರೆ ಅವನು ಬದುಕುವನೇ? ಅವನು ಮಾಡಿ ರುವ ಎಲ್ಲಾ ನೀತಿಯು ಜ್ಞಾಪಕಮಾಡಲ್ಪಡುವದಿಲ್ಲ; ಅವನು ಮಾಡಿರುವ ಅಪರಾಧದಿಂದಲೂ ಪಾಪ ದಿಂದಲೂ ಅವುಗಳಲ್ಲಿ ಸಾಯುವನು.

25ಆದರೆ ನೀವು, ಕರ್ತನ ಮಾರ್ಗವು ಸರಿಯಲ್ಲ ಅನ್ನುತ್ತೀರಿ; ಓ ಇಸ್ರಾ ಯೇಲಿನ ಮನೆಯವರೇ, ಈಗ ಕೇಳಿರಿ, ನನ್ನ ಮಾರ್ಗವು ಸಮವಲ್ಲವೇ? ನಿಮ್ಮ ಮಾರ್ಗಗಳು ಸಮವಲ್ಲದವು ಗಳೇ.

26ನೀತಿವಂತನು ತನ್ನ ನೀತಿಯನ್ನು ಬಿಟ್ಟು ತಿರುಗಿಕೊಂಡು ಅನ್ಯಾಯಮಾಡಿ ಇವುಗಳಲ್ಲಿ ಸತ್ತರೆ, ಅವನು ಮಾಡಿದ ಅನ್ಯಾಯದಿಂದಲೇ ಸಾಯುವನು.

27ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು ನ್ಯಾಯವನ್ನೂ ನೀತಿಯನ್ನೂ ಅನುಸರಿಸಿದರೆ ತನ್ನ ಪ್ರಾಣವನ್ನು ಉಳಿಸಿಕೊಂಡು ಬದುಕುವನು.

ಯೆಹೆಜ್ಕೇಲನು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी