ಯಾಜಕಕಾಂಡ 21:21

ಯಾಜಕನಾದ ಆರೋನನ ಸಂತತಿಯಲ್ಲಿ ಕಳಂಕವುಳ್ಳ ಯಾವ ಮನುಷ್ಯನೂ ಅಗ್ನಿ ಸಮರ್ಪಣೆಗಳನ್ನು ಅರ್ಪಿಸು ವದಕ್ಕಾಗಿ ಕರ್ತನ ಸನ್ನಿಧಿಯಲ್ಲಿ ಬರಬಾರದು; ಕಳಂಕವುಳ್ಳವನು ತನ್ನ ದೇವರ ರೊಟ್ಟಿಯನ್ನು ಅರ್ಪಿಸುವದಕ್ಕಾಗಿ ಸವಿಾಪಬರಬಾರದು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 21

19ಮುರಿದ ಪಾದವುಳ್ಳವನು ಮುರಿದ ಕೈಯುಳ್ಳವನು

20ಗೂನು ಬೆನ್ನುಳ್ಳವನು ಗಿಡ್ಡನು ಕಣ್ಣುಗಳಲ್ಲಿ ಕಳಂಕವುಳ್ಳವನು ಹುರುಕುಳ್ಳವನು ತುರಿಯುಳ್ಳವನು ತನ್ನ ಬೀಜಹೊಡೆದವನು

21ಯಾಜಕನಾದ ಆರೋನನ ಸಂತತಿಯಲ್ಲಿ ಕಳಂಕವುಳ್ಳ ಯಾವ ಮನುಷ್ಯನೂ ಅಗ್ನಿ ಸಮರ್ಪಣೆಗಳನ್ನು ಅರ್ಪಿಸು ವದಕ್ಕಾಗಿ ಕರ್ತನ ಸನ್ನಿಧಿಯಲ್ಲಿ ಬರಬಾರದು; ಕಳಂಕವುಳ್ಳವನು ತನ್ನ ದೇವರ ರೊಟ್ಟಿಯನ್ನು ಅರ್ಪಿಸುವದಕ್ಕಾಗಿ ಸವಿಾಪಬರಬಾರದು.

22ಅವನು ಅತಿ ಪರಿಶುದ್ಧವಾದ ಮತ್ತು ಪರಿಶುದ್ಧವಾದ ತನ್ನ ದೇವರ ರೊಟ್ಟಿಯನ್ನು ತಿನ್ನಬೇಕು.

23ಆದರೆ ಅವನು ಕಳಂಕವುಳ್ಳವನಾದದರಿಂದ ತೆರೆಯ ಒಳಕ್ಕೆ ಹೋಗ ಬಾರದು ಇಲ್ಲವೆ ಯಜ್ಞವೇದಿಯ ಸವಿಾಪಕ್ಕೂ ಬರಬಾರದು. ಹೀಗೆ ಅವನು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು; ಅವರನ್ನು ಶುದ್ಧೀಕರಿಸುವ ಕರ್ತನು ನಾನೇ.

ಯಾಜಕಕಾಂಡ 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी