ಕರ್ತನು ಪಾಳೆಯದಲ್ಲಿ ಬಂದನೆಂದು ಹೇಳಿಕೊಂಡು ಫಿಲಿಷ್ಟಿಯರು ಭಯ ಪಟ್ಟು--ನಮಗೆ ಅಯ್ಯೋ! ಪೂರ್ವದಲ್ಲಿ ಇಂಥದ್ದು ಆಗಿರಲಿಲ್ಲ.
5ಕರ್ತನ ಒಡಂಬಡಿ ಕೆಯ ಮಂಜೂಷವು ಪಾಳೆಯಕ್ಕೆ ಬಂದಾಗ ಇಸ್ರಾಯೇ ಲ್ಯರೆಲ್ಲಾ ಮಹಾ ಆರ್ಭಟವಾಗಿ ಭೂಮಿ ಕಂಪಿಸುವ ಹಾಗೆ ಆರ್ಭಟಿಸಿದರು.
6ಅವರು ಆರ್ಭಟಿಸುವ ಶಬ್ದ ವನ್ನು ಫಿಲಿಷ್ಟಿಯರು ಕೇಳಿದಾಗ--ಇಬ್ರಿಯರ ಪಾಳೆ ಯದ ಈ ಮಹಾ ಆರ್ಭಟವೇನು ಎಂದು ಹೇಳಿ ಕರ್ತನ ಒಡಂಬಡಿಕೆಯ ಮಂಜೂಷವು ಪಾಳೆಯದಲ್ಲಿ ಬಂತೆಂದು ತಿಳುಕೊಂಡರು.
7ಕರ್ತನು ಪಾಳೆಯದಲ್ಲಿ ಬಂದನೆಂದು ಹೇಳಿಕೊಂಡು ಫಿಲಿಷ್ಟಿಯರು ಭಯ ಪಟ್ಟು--ನಮಗೆ ಅಯ್ಯೋ! ಪೂರ್ವದಲ್ಲಿ ಇಂಥದ್ದು ಆಗಿರಲಿಲ್ಲ.
8ನಮಗೆ ಅಯ್ಯೋ! ಆ ಪರಾಕ್ರಮಿಯಾದ ದೇವರುಗಳ ಕೈಯಿಂದ ನಮ್ಮನ್ನು ತಪ್ಪಿಸುವವನಾರು ಐಗುಪ್ತ್ಯರನ್ನು ಅರಣ್ಯದಲ್ಲಿ ಸಕಲ ಬಾಧೆಗಳಿಂದ ಹೊಡೆದ ದೇವರುಗಳು ಇವರೇ.
9ಓ ಫಿಲಿಷ್ಟಿಯರೇ, ನೀವು ಬಲಗೊಂಡು ಧೈರ್ಯವುಳ್ಳ ಮನುಷ್ಯರಂತೆ ಇರ್ರಿ; ಇಬ್ರಿಯರು ನಿಮಗೆ ಸೇವೆಮಾಡಿದ ಪ್ರಕಾರ ನೀವು ಅವರಿಗೆ ಸೇವೆಮಾಡದ ಹಾಗೆ ಧೈರ್ಯವುಳ್ಳ ಮನುಷ್ಯರಂತೆ ಇದ್ದು ಯುದ್ಧಮಾಡಿರೆಂದು ಹೇಳಿ ಕೊಂಡರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ