ಅಪೊಸ್ತಲರ ಕೃತ್ಯಗಳು 15:3

ಸಭೆಯವರು ಅವರನ್ನು ಸಾಗಕಳು ಹಿಸಿದ ಮೇಲೆ ಅವರು ಫೊಯಿನಿಕೆ ಸಮಾರ್ಯಗಳ ಮಾರ್ಗವಾಗಿ ಹಾದು ಹೋಗುತ್ತಿರುವಾಗ ಅನ್ಯಜನರು (ಕರ್ತನ ಕಡೆಗೆ) ತಿರುಗಿಕೊಂಡ ವಿಷಯವನ್ನು ವಿವರ ವಾಗಿ ಹೇಳಿದ್ದರಿಂದ ಸಹೋದರರೆಲ್ಲರೂ ಬಹಳವಾಗಿ ಸಂತೋಷಪಡುವದಕ್ಕೆ ಕಾರಣವಾಯಿತು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 15

1ಬಳಿಕ ಕೆಲವರು ಯೂದಾಯದಿಂದ ಬಂದು--ಮೋಶೆಯ ನೇಮದ ಪ್ರಕಾರ ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗಲಾರದು ಎಂಬದಾಗಿ ಸಹೋದರರಿಗೆ ಉಪದೇಶ ಮಾಡುತ್ತಿದ್ದರು.

2ಆದದರಿಂದ ಅವರ ಮತ್ತು ಪೌಲ ಬಾರ್ನಬರ ಮಧ್ಯೆ ದೊಡ್ಡ ಭಿನ್ನಾಭಿ ಪ್ರಾಯವೂ ವಾಗ್ವಾದವೂ ಉಂಟಾದಾಗ ಪೌಲ ಬಾರ್ನಬರೂ ಅವರಲ್ಲಿ ಬೇರೆ ಕೆಲವರೂ ಈ ಪ್ರಶ್ನೆಗಾಗಿ ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರಿಯರ ಬಳಿಗೆ ಹೋಗಬೇಕೆಂದು ಅವರು ನಿರ್ಧರಿಸಿದರು.

3ಸಭೆಯವರು ಅವರನ್ನು ಸಾಗಕಳು ಹಿಸಿದ ಮೇಲೆ ಅವರು ಫೊಯಿನಿಕೆ ಸಮಾರ್ಯಗಳ ಮಾರ್ಗವಾಗಿ ಹಾದು ಹೋಗುತ್ತಿರುವಾಗ ಅನ್ಯಜನರು (ಕರ್ತನ ಕಡೆಗೆ) ತಿರುಗಿಕೊಂಡ ವಿಷಯವನ್ನು ವಿವರ ವಾಗಿ ಹೇಳಿದ್ದರಿಂದ ಸಹೋದರರೆಲ್ಲರೂ ಬಹಳವಾಗಿ ಸಂತೋಷಪಡುವದಕ್ಕೆ ಕಾರಣವಾಯಿತು.

4ಅವರು ಯೆರೂಸಲೇಮಿಗೆ ಬಂದಮೇಲೆ ಸಭೆಯವರೂ ಅಪೊಸ್ತ ಲರೂ ಹಿರಿಯರೂ ಅವರನ್ನು ಸೇರಿಸಿಕೊಂಡಾಗ ದೇವರು ತಮ್ಮೊಂದಿಗಿದ್ದು ಮಾಡಿದ ಕಾರ್ಯಗಳನ್ನೆಲ್ಲಾ ಅವರಿಗೆ ವಿವರಿಸಿದರು.

5ಆದರೆ ಫರಿಸಾಯರ ಪಂಗಡದವರಲ್ಲಿ ನಂಬಿದ್ದ ಕೆಲವರು ಎದ್ದು--ಅವರಿಗೆ ಸುನ್ನತಿ ಮಾಡಿಸುವದು ಅವಶ್ಯವೆಂತಲೂ ಮೋಶೆಯ ನ್ಯಾಯಪ್ರಮಾಣವನ್ನು ಕೈಕೊಂಡು ನಡೆಯಬೇಕೆಂತಲೂ ಅವರಿಗೆ ಅಪ್ಪಣೆಕೊಡಬೇಕು ಎಂದು ಹೇಳಿ ದರು.

ಅಪೊಸ್ತಲರ ಕೃತ್ಯಗಳು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी