ಆಮೇಲೆ ಅವನು ಯೆರೂಸ ಲೇಮಿನಲ್ಲಿ ಅವರ ಕೂಡ ಬರುತ್ತಾ ಹೋಗುತ್ತಾ ಇದ್ದನು.
26ಸೌಲನು ಯೆರೂಸಲೇಮಿಗೆ ಬಂದು ಶಿಷ್ಯ ರೊಳಗೆ ಸೇರಿಕೊಳ್ಳಬೇಕೆಂದು ಪ್ರಯತ್ನಮಾಡಿದಾಗ ಎಲ್ಲರೂ ಅವನಿಗೆ ಭಯಪಟ್ಟು ಅವನನ್ನು ಶಿಷ್ಯನೆಂದು ನಂಬದೆ ಹೋದರು.
27ಆದರೆ ಬಾರ್ನಬನು ಅವನನ್ನು ಅಪೊಸ್ತಲರ ಬಳಿಗೆ ಕರೆದುಕೊಂಡು ಹೋಗಿ ಅವನು ಹೇಗೆ ದಾರಿಯಲ್ಲಿ ಕರ್ತನನ್ನು ಕಂಡದ್ದನ್ನೂ ಆತನು ಅವನ ಸಂಗಡ ಮಾತನಾಡಿ ದ್ದನ್ನೂ ದಮಸ್ಕದೊಳಗೆ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಮಾತನಾಡಿದ್ದನ್ನೂ ಅವರಿಗೆ ವಿವರವಾಗಿ ತಿಳಿಯಪಡಿಸಿದನು.
28ಆಮೇಲೆ ಅವನು ಯೆರೂಸ ಲೇಮಿನಲ್ಲಿ ಅವರ ಕೂಡ ಬರುತ್ತಾ ಹೋಗುತ್ತಾ ಇದ್ದನು.
29ಕರ್ತನಾದ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಮಾತನಾಡಿ ಗ್ರೀಕರೊಂದಿಗೆ ತರ್ಕಿಸುತ್ತಿ ದ್ದನು. ಆದರೆ ಅವರು ಅವನನ್ನು ಕೊಲ್ಲುವದಕ್ಕೆ ಪ್ರಯತ್ನ ಮಾಡಿದರು.
30ಇದು ಸಹೋದರರಿಗೆ ತಿಳಿದು ಬರಲು ಅವರು ಅವನನ್ನು ಕೈಸರೈಯಕ್ಕೆ ಕರಕೊಂಡು ಹೋಗಿ ಅಲ್ಲಿಂದ ತಾರ್ಸಕ್ಕೆ ಕಳುಹಿಸಿದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ