ಮಲಾಕಿಯ 1:4

ಎದೋಮು--ನಾವು ಬಡಕಲಾದೆವು, ಆದರೆ ನಾವು ತಿರಿಗಿಕೊಂಡು ಹಾಳಾದ ಸ್ಥಳಗಳನ್ನು ಕಟ್ಟುವೆವೆಂದು ಹೇಳಿದರೂ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಅವರು ಕಟ್ಟಬಹುದು, ಆದರೆ ನಾನು ಕೆಡವಿಬಿಡುವೆನು; ಅದಕ್ಕ ವರು--ದುಷ್ಟತನದ ಮೇರೆಯೂ ಕರ್ತನ ನಿತ್ಯ ಕೋಪದ ಜನಾಂಗವೆಂದೂ ಕರೆಯುವರು.

ಸಂದರ್ಭದೊಂದಿಗೆ ಓದಿ · ಮಲಾಕಿಯ 1

2ನಿಮ್ಮನ್ನು ಪ್ರೀತಿಮಾಡಿದ್ದೇನೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ ನೀವು--ಯಾವದರಲ್ಲಿ ನೀನು ನಮ್ಮನ್ನು ಪ್ರೀತಿಮಾಡಿದ್ದೀ ಎಂದು ಹೇಳುತ್ತೀರಿ. ಕರ್ತನು ಅನು ್ನತ್ತಾನೆ--ಏಸಾವನು ಯಾಕೋಬನಿಗೆ ಅಣ್ಣನಲ್ಲವೋ? ಆದಾಗ್ಯೂ ನಾನು ಯಾಕೋಬನನ್ನು ಪ್ರೀತಿ ಮಾಡಿ ದೆನು.

3ಆದರೆ ಏಸಾವನನ್ನು ಹಗೆ ಮಾಡಿದೆನು; ಅವನ ಬೆಟ್ಟಗಳನ್ನು ಹಾಳುಮಾಡಿ ಅವನ ಸ್ವಾಸ್ತ್ಯವನ್ನು ಅಡವಿಯ ಸರ್ಪಗಳಿಗೆ ಕೊಟ್ಟೆನು.

4ಎದೋಮು--ನಾವು ಬಡಕಲಾದೆವು, ಆದರೆ ನಾವು ತಿರಿಗಿಕೊಂಡು ಹಾಳಾದ ಸ್ಥಳಗಳನ್ನು ಕಟ್ಟುವೆವೆಂದು ಹೇಳಿದರೂ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಅವರು ಕಟ್ಟಬಹುದು, ಆದರೆ ನಾನು ಕೆಡವಿಬಿಡುವೆನು; ಅದಕ್ಕ ವರು--ದುಷ್ಟತನದ ಮೇರೆಯೂ ಕರ್ತನ ನಿತ್ಯ ಕೋಪದ ಜನಾಂಗವೆಂದೂ ಕರೆಯುವರು.

5ನಿಮ್ಮ ಕಣ್ಣುಗಳು ನೋಡುವವು; ಇಸ್ರಾಯೇಲಿನ ಮೇರೆ ಯಿಂದ ಕರ್ತನು ಘನಹೊಂದುವನು ಎಂದು ನೀವು ಹೇಳುವಿರಿ.

6ಮಗನು ತಂದೆಯನ್ನು ದಾಸನು ಯಜಮಾನನನ್ನು ಸನ್ಮಾನಿಸುತ್ತಾನೆ; ನಾನು ತಂದೆಯಾಗಿದ್ದರೆ ನನ್ನ ಸನ್ಮಾನ ವೆಲ್ಲಿ? ನಾನು ಯಜಮಾನನಾಗಿದ್ದರೆ ನನ್ನ ಭಯವು ಎಲ್ಲಿ ಎಂದು ನನ್ನ ಹೆಸರನ್ನು ಅಸಡ್ಡೆ ಮಾಡುವ ಯಾಜಕರಾದ ನಿಮಗೆ ಸೈನ್ಯಗಳ ಕರ್ತನು ಹೇಳುತ್ತಾನೆ. ಆದರೆ ನೀವು--ನಿನ್ನ ಹೆಸರನ್ನು ಯಾವದರಲ್ಲಿ ನಾವು ಅಸಡ್ಡೆ ಮಾಡಿದ್ದೇವೆಂದು ಹೇಳುತ್ತೀರಿ.

ಮಲಾಕಿಯ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी