ಓ ಕರ್ತನೇ, ನನ್ನ ಕೂಗು ನಿನ್ನ ಸನ್ನಿಧಿಗೆ ಮುಟ್ಟಲಿ; ನಿನ್ನ ವಾಕ್ಯದ ಪ್ರಕಾರ ನನಗೆ ಜ್ಞಾನವನ್ನು ಕೊಡು.
167ನನ್ನ ಪ್ರಾಣವು ನಿನ್ನ ಸಾಕ್ಷಿಗಳನ್ನು ಕೈಕೊಂಡಿದೆ; ನಾನು ಅವುಗಳನ್ನು ಬಹಳವಾಗಿ ಪ್ರೀತಿಮಾಡುತ್ತೇನೆ;
168ನಿನ್ನ ಕಟ್ಟಳೆ ಗಳನ್ನೂ ಸಾಕ್ಷಿಗಳನ್ನೂ ಕೈಕೊಳ್ಳುತ್ತೇನೆ; ನನ್ನ ಮಾರ್ಗ ಗಳೆಲ್ಲಾ ನಿನ್ನ ಮುಂದೆ ಇವೆ.
169ಓ ಕರ್ತನೇ, ನನ್ನ ಕೂಗು ನಿನ್ನ ಸನ್ನಿಧಿಗೆ ಮುಟ್ಟಲಿ; ನಿನ್ನ ವಾಕ್ಯದ ಪ್ರಕಾರ ನನಗೆ ಜ್ಞಾನವನ್ನು ಕೊಡು.
170ನನ್ನ ವಿಜ್ಞಾಪನೆಯು ನಿನ್ನ ಸಮ್ಮುಖಕ್ಕೆ ಬರಲಿ; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಬಿಡಿಸು.
171ನೀನು ನಿನ್ನ ನಿಯಮಗಳನ್ನು ನನಗೆ ಕಲಿಸಿದಾಗ ನನ್ನ ತುಟಿಗಳು ನಿನ್ನ ಸ್ತೋತ್ರವನ್ನು ನುಡಿಯುತ್ತವೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ