ನೆಹೆಮಿಯ 5:6

ಅವರ ಕೂಗನ್ನೂ ಈ ಮಾತುಗಳನ್ನೂ ನಾನು ಕೇಳಿದಾಗ ಬಹಳ ಕೋಪಿಸಿಕೊಂಡೆನು.

ಸಂದರ್ಭದೊಂದಿಗೆ ಓದಿ · ನೆಹೆಮಿಯ 5

4ಇನ್ನು ಕೆಲವರು--ಅರಸನಿಗೆ ಕಪ್ಪವನ್ನು ಕೊಡಲು ನಾವು ನಮ್ಮ ಹೊಲಗಳ ಮೇಲೆಯೂ ನಮ್ಮ ದ್ರಾಕ್ಷೇ ತೋಟಗಳ ಮೇಲೆಯೂ ಸಾಲವನ್ನು ತೆಗೆದು ಕೊಂಡಿದ್ದೇವೆ.

5ಆದರೂ ನಮ್ಮ ಶರೀರವು ನಮ್ಮ ಸಹೋದರರ ಶರೀರದ ಹಾಗೆ, ನಮ್ಮ ಮಕ್ಕಳು ಅವರ ಮಕ್ಕಳ ಹಾಗೆ ಆದರೆ ಇಗೋ, ಸೇವಕರಾಗಿರಲು ನಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ದಾಸರಾಗುವದಕ್ಕೆ ತಂದಿದ್ದೇವೆ. ನಮ್ಮ ಕುಮಾರ್ತೆ ಯರಲ್ಲಿ ಕೆಲವರು ಆಗಲೇ ದಾಸರಾದರು. ಅವರನ್ನು ಬಿಡಿಸಲು ನಮಗೆ ಶಕ್ತಿ ಇಲ್ಲ. ಯಾಕಂದರೆ ನಮ್ಮ ಹೊಲಗಳೂ ದ್ರಾಕ್ಷೇ ತೋಟಗಳೂ ಅನ್ಯರಿಗೆ ಸೇರಿ ದವು ಅಂದರು.

6ಅವರ ಕೂಗನ್ನೂ ಈ ಮಾತುಗಳನ್ನೂ ನಾನು ಕೇಳಿದಾಗ ಬಹಳ ಕೋಪಿಸಿಕೊಂಡೆನು.

7ಹೃದಯ ದಲ್ಲಿ ಯೋಚನೆ ಮಾಡಿಕೊಂಡು ಪ್ರಮುಖರನ್ನೂ ಅಧಿಕಾರಸ್ಥರನ್ನೂ ಗದರಿಸಿ ಅವರಿಗೆ--ನೀವು ಪ್ರತಿ ಮನುಷ್ಯನು ಅವನವನ ಸಹೋದರನಿಂದ ಬಡ್ಡಿಯನ್ನು ಒತ್ತಾಯದಿಂದ ತಕ್ಕೊಳ್ಳುತ್ತೀರಿ ಎಂದು ಹೇಳಿ ಅವರ ಮೇಲೆ ದೊಡ್ಡ ಸಭೆಯನ್ನು ನೇಮಿಸಿದನು.

8ಅವ ರಿಗೆ--ಅನ್ಯರಿಗೆ ಮಾರಲ್ಪಟ್ಟ ಯೆಹೂದ್ಯರಾದ ನಮ್ಮ ಸಹೋದರರನ್ನು ನಾವು ನಮಗೆ ಶಕ್ತಿ ಇದ್ದ ಹಾಗೆ ವಿಮೋಚಿಸಿದೆವು. ನೀವು ನಿಮ್ಮ ಸಹೋದರರನ್ನು ಮಾರಿ ಬಿಡುವಿರೋ? ಇಲ್ಲವೆ ಅವರು ನಮಗೆ ಮಾರ ಲ್ಪಡುವರೋ ಅಂದೆನು. ಆಗ ಅವರು ಮೌನವಾಗಿ ದ್ದರು; ಅವರಿಗೆ ಮಾತು ಇಲ್ಲದೆ ಹೋಯಿತು.

ನೆಹೆಮಿಯ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी