ಮರು ದಿವಸದಲ್ಲಿ ಆದದ್ದೇನಂದರೆ, ಜನರು ಹೊಲಕ್ಕೆ ಹೊರಟರು: ಅವರು ಅಬೀಮೆಲೆಕನಿಗೆ ತಿಳಿಸಿದರು.
40ಆದರೆ ಅಬೀಮೆಲೆಕನು ಅವ ನನ್ನು ಹಿಂದಟ್ಟಿದಾಗ ಅವನು ಅವನ ಮುಂದೆ ಓಡಿ ಹೋದನು. ಪ್ರವೇಶ ದ್ವಾರದ ವರೆಗೆ ಅನೇಕರು ಸಂಹಾರವಾಗಿ ಅನೇಕರು ಗಾಯಗೊಂಡರು.
41ಆಗ ಅಬೀಮೆಲೆಕನು ಅರೂಮದಲ್ಲಿ ವಾಸಮಾಡಿದನು; ಆದರೆ ಜೆಬುಲನು ಗಾಳನನ್ನೂ ಅವನ ಸಹೋದರ ರನ್ನೂ ಶೆಕೆಮಿನಲ್ಲಿ ಇರದ ಹಾಗೆ ಹೊರಡಿಸಿಬಿಟ್ಟನು.
42ಮರು ದಿವಸದಲ್ಲಿ ಆದದ್ದೇನಂದರೆ, ಜನರು ಹೊಲಕ್ಕೆ ಹೊರಟರು: ಅವರು ಅಬೀಮೆಲೆಕನಿಗೆ ತಿಳಿಸಿದರು.
43ಅವನು ಜನರನ್ನು ತಕ್ಕೊಂಡು ಅವರನ್ನು ಮೂರು ಗುಂಪುಗಳಾಗಿ ಮಾಡಿ ಹೊಲದಲ್ಲಿ ಹೊಂಚಿ ಕೊಂಡನು. ಇಗೋ, ಜನರು ಪಟ್ಟಣದಿಂದ ಹೊರಗೆ ಬಂದರು. ಅವನು ಅವರ ಮೇಲೆ ಎದ್ದು ಬಂದು ಅವರನ್ನು ಹೊಡೆದನು.
44ಅಬೀಮೆಲೆಕನೂ ಅವನ ಸಂಗಡ ಇದ್ದ ಜನರ ಗುಂಪೂ ಮುಂದಕ್ಕೆ ಓಡಿ ಪಟ್ಟಣದ ಪ್ರವೇಶ ದ್ವಾರದಲ್ಲಿ ನಿಂತರು. ಮಿಕ್ಕಾದ ಎರಡು ಗುಂಪು ಜನರು ಹೊಲದಲ್ಲಿರುವವರೆ ಲ್ಲರ ಮೇಲೆ ಬಿದ್ದು ಅವರನ್ನು ಹತಮಾಡಿಬಿಟ್ಟರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ