ಧರ್ಮೋಪದೇಶಕಾಂಡ 34:6

ಆತನು ಅವನನ್ನು ಮೋವಾಬಿನ ದೇಶದ ತಗ್ಗಿನಲ್ಲಿ ಬೇತ್ಪಯೋರಿಗೆ ಎದುರಾಗಿ ಹೂಣಿಟ್ಟನು; ಅವನ ಸಮಾಧಿ ಇಂದಿನ ವರೆಗೆ ಯಾರಿಗೂ ಗೊತ್ತಿಲ್ಲ.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 34

4ಕರ್ತನು ಅವನಿಗೆ--ನಾನು ನಿನ್ನ ಸಂತತಿಗೆ ಕೊಡುತ್ತೇನೆಂದು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಪ್ರಮಾಣಮಾಡಿದ ದೇಶವು ಇದೇ. ಅದನ್ನು ನಿನಗೆ ತೋರಿಸಿದೆನು; ಆದರೆ ನೀನು ಅಲ್ಲಿಗೆ ದಾಟಿ ಸೇರುವದಿಲ್ಲ ಎಂದು ಹೇಳಿದನು.

5ಕರ್ತನ ಮಾತಿನ ಹಾಗೆ ಕರ್ತನ ದಾಸನಾದ ಮೋಶೆಯು ಅಲ್ಲಿ ಮೋವಾಬಿನ ದೇಶದಲ್ಲಿ ಸತ್ತನು.

6ಆತನು ಅವನನ್ನು ಮೋವಾಬಿನ ದೇಶದ ತಗ್ಗಿನಲ್ಲಿ ಬೇತ್ಪಯೋರಿಗೆ ಎದುರಾಗಿ ಹೂಣಿಟ್ಟನು; ಅವನ ಸಮಾಧಿ ಇಂದಿನ ವರೆಗೆ ಯಾರಿಗೂ ಗೊತ್ತಿಲ್ಲ.

7ಮೋಶೆಯು ಸಾಯುವಾಗ ನೂರಿಪ್ಪತ್ತು ವರುಷದವ ನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ; ಅವನ ತ್ರಾಣ ಕುಂದಲಿಲ್ಲ.

8ಇಸ್ರಾಯೇಲ್‌ ಮಕ್ಕಳು ಮೋವಾಬಿನ ಬೈಲಿನಲ್ಲಿ ಮೋಶೆಯ ನಿಮಿತ್ತ ಮೂವತ್ತು ದಿವಸ ಅತ್ತರು. ಈ ಪ್ರಕಾರ ಮೋಶೆಯ ನಿಮಿತ್ತವಾದ ಗೋಳಾಟದಲ್ಲಿ ಅಳುವ ದಿವಸಗಳು ಮುಗಿದವು.

ಧರ್ಮೋಪದೇಶಕಾಂಡ 34 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी