೧ ಪೂರ್ವಕಾಲವೃತ್ತಾಂತ 15:24

ಯಾಜಕರಾದ ಶೆಬನ್ಯನೂ ಯೋಷಾಫಾಟನೂ ನೆತನೇಲ್‌ನೂ ಅಮಾಸೈಯು ಜೆಕರ್ಯನೂ ಬೆನಾಯನೂ ಎಲೀಯೆಜೆರನೂ ದೇವರ ಮಂಜೂಷದ ಮುಂದೆ ತುತೂರಿಗಳನ್ನು ಊದುತ್ತಾ ಇದ್ದರು; ಒಬೇದೆ ದೋಮನೂ ಯೆಹೀಯನೂ ಮಂಜೂಷಕ್ಕೆ ದ್ವಾರ ಪಾಲಕರಾಗಿದ್ದರು.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 15

22ಆದರೆ ಲೇವಿಯರ ಪ್ರಧಾನನಾದ ಕೆನನ್ಯನು ಹಾಡು ವದಕ್ಕೆ ನೇಮಿಸಲ್ಪಟ್ಟಿದ್ದನು. ಅವನು ಗ್ರಹಿಕೆಯುಳ್ಳವನಾ ದದರಿಂದ ಹಾಡುವದಕ್ಕೆ ಕಲಿಸುತ್ತಿದ್ದನು.

23ಬೆರಕ್ಯನೂ ಎಲ್ಕಾನನೂ ಮಂಜೂಷಕ್ಕೆ ದ್ವಾರಪಾಲಕರಾಗಿದ್ದರು.

24ಯಾಜಕರಾದ ಶೆಬನ್ಯನೂ ಯೋಷಾಫಾಟನೂ ನೆತನೇಲ್‌ನೂ ಅಮಾಸೈಯು ಜೆಕರ್ಯನೂ ಬೆನಾಯನೂ ಎಲೀಯೆಜೆರನೂ ದೇವರ ಮಂಜೂಷದ ಮುಂದೆ ತುತೂರಿಗಳನ್ನು ಊದುತ್ತಾ ಇದ್ದರು; ಒಬೇದೆ ದೋಮನೂ ಯೆಹೀಯನೂ ಮಂಜೂಷಕ್ಕೆ ದ್ವಾರ ಪಾಲಕರಾಗಿದ್ದರು.

25ಹೀಗೆಯೇ ದಾವೀದನೂ ಇಸ್ರಾಯೇಲಿನ ಹಿರಿ ಯರೂ ಸಹಸ್ರಗಳ ಮೇಲೆ ಇರುವ ಅಧಿಪತಿಗಳೂ ಸಂತೋಷವಾಗಿ ಒಬೇದೆದೋಮನ ಮನೆಯೊಳಗಿಂದ ಕರ್ತನ ಒಡಂಬಡಿಕೆಯ ಮಂಜೂಷವನ್ನು ತರಲು ಹೋದರು.

26ದೇವರು ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರಲು ಲೇವಿಯರಿಗೆ ಸಹಾಯ ಕೊಟ್ಟದ್ದರಿಂದ ಅವರು ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಬಲಿಯಾಗಿ ಅರ್ಪಿಸಿದರು.

೧ ಪೂರ್ವಕಾಲವೃತ್ತಾಂತ 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी