ಯೆಹೆಜ್ಕೇಲನು 29:8

ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ನಿನ್ನ ಮೇಲೆ ಕತ್ತಿಯನ್ನು ತರುತ್ತೇನೆ. ಮನುಷ್ಯರನ್ನೂ ಮೃಗಗಳನ್ನೂ ನಿನ್ನೊಳಗಿಂದ ಕಡಿದುಬಿಡುತ್ತೇನೆ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 29

6ಆಗ ಎಲ್ಲಾ ಐಗುಪ್ತದ ನಿವಾಸಿಗಳು ನಾನೇ ಕರ್ತನೆಂದು ತಿಳಿಯುವರು; ಅವರು ಇಸ್ರಾಯೇಲ್ಯರ ಮನೆತನದವರಿಗೆ ದಂಟಿನ ಊರು ಗೋಲಾಗಿದ್ದರು.

7ಇಸ್ರಾಯೇಲ್ಯರು ನಿನ್ನ ಮೇಲೆ ಕೈಯಿಡಲು ನೀನು ಮುರಿದು ಅವರ ಹೆಗಲನ್ನು ಚುಚ್ಚಿದಿ; ಅವರು ನಿನ್ನನ್ನು ಊರಿಕೊಂಡಾಗ ನೀನು ಒಡೆದು ಅದರ ನಡುವುಗಳನ್ನೆಲ್ಲಾ ನಿಲ್ಲಿಸಿಬಿಟ್ಟೆ.

8ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ನಿನ್ನ ಮೇಲೆ ಕತ್ತಿಯನ್ನು ತರುತ್ತೇನೆ. ಮನುಷ್ಯರನ್ನೂ ಮೃಗಗಳನ್ನೂ ನಿನ್ನೊಳಗಿಂದ ಕಡಿದುಬಿಡುತ್ತೇನೆ.

9ಅವನು--ಆ ನದಿಯು ನನ್ನದೇ, ನಾನೇ ಅದನ್ನು ನಿರ್ಮಿಸಿದವನೆಂದು ಹೇಳಿಕೊಂಡದ್ದ ರಿಂದ ಐಗುಪ್ತ ದೇಶವು ಹಾಳು ಅರಣ್ಯವಾಗುವದು; ಆಗ ನಾನೇ ಕರ್ತನೆಂದು ಅವರು ತಿಳಿಯುವರು.

10ಆದದರಿಂದ ಇಗೋ, ನಾನು ನಿನಗೆ ವಿರೋಧ ವಾಗಿಯೂ ನಿನ್ನ ನದಿಗಳಿಗೆ ವಿರುದ್ಧವಾಗಿಯೂ ಇದ್ದೇನೆ. ಐಗುಪ್ತದೇಶವನ್ನು ಸೆವೇನೆಯ ಗೋಪುರ ಮೊದಲುಗೊಂಡು ಕೂಷಿನ ಪ್ರಾಂತ್ಯದವರೆಗೂ ಸಂಪೂರ್ಣವಾಗಿ ಕಾಡಾಗಿಯೂ ಹಾಳಾಗಿಯೂ ಮಾಡುತ್ತೇನೆ.

ಯೆಹೆಜ್ಕೇಲನು 29 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी