೧ ಅರಸುಗಳು 8:7

ಕೆರೂಬಿಗಳು ಎರಡು ರೆಕ್ಕೆಗಳನ್ನು ಮಂಜೂಷವಿದ್ದ ಸ್ಥಳದ ಮೇಲೆ ಚಾಚಿದ್ದವು. ಹೀಗೆಯೇ ಕೆರೂಬಿಗಳು ಮಂಜೂಷವನ್ನೂ ಅದರ ಕೋಲುಗಳನ್ನೂ ಮೇಲಿನಿಂದ ಮುಚ್ಚಿದ್ದವು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 8

5ಆಗ ಅರಸನಾದ ಸೊಲೊಮೋನನೂ ಅವನ ಬಳಿಗೆ ಕೂಡಿದ ಇಸ್ರಾಯೆಲ್‌ ಸಭೆಯವರೆಲ್ಲರೂ ಮಂಜೂ ಷದ ಮುಂದೆ ನಿಂತು ಹೆಚ್ಚಾದದರಿಂದ ಲೆಕ್ಕಿಸಲಾಗದಷ್ಟು ಕುರಿಗಳನ್ನೂ ಪಶುಗಳನ್ನೂ ಬಲಿಯಾಗಿ ಅರ್ಪಿಸಿ ದರು.

6ಇದಲ್ಲದೆ ಯಾಜಕರು ಕರ್ತನ ಒಡಂಬಡಿಕೆಯ ಮಂಜೂಷವನ್ನು ಮಹಾಪರಿಶುದ್ಧ ಸ್ಥಳವೆಂಬ ದೈವೋ ಕ್ತಿಯ ಮಂದಿರದ ಸ್ಥಾನಕ್ಕೆ ತಂದು ಕೆರೂಬಿಗಳ ರೆಕ್ಕೆಗಳ ಕೆಳಗೆ ಅದರ ಸ್ಥಳದಲ್ಲಿ ಇಟ್ಟರು.

7ಕೆರೂಬಿಗಳು ಎರಡು ರೆಕ್ಕೆಗಳನ್ನು ಮಂಜೂಷವಿದ್ದ ಸ್ಥಳದ ಮೇಲೆ ಚಾಚಿದ್ದವು. ಹೀಗೆಯೇ ಕೆರೂಬಿಗಳು ಮಂಜೂಷವನ್ನೂ ಅದರ ಕೋಲುಗಳನ್ನೂ ಮೇಲಿನಿಂದ ಮುಚ್ಚಿದ್ದವು.

8ಆಗ ಕೋಲುಗಳು ದೈವೋಕ್ತಿಯ ಸ್ಥಾನದ ಮುಂದೆ ಪರಿಶುದ್ಧ ಸ್ಥಳದಲ್ಲಿ ಕಾಣಲ್ಪಡುವ ಹಾಗೆ ಎಳಕೊಂಡರು; ಆದರೆ ಅವು ಹೊರಗೆ ಕಾಣಲ್ಪಡಲಿಲ್ಲ. ಅಲ್ಲಿ ಅವು ಇಂದಿನ ವರೆಗೂ ಇರುತ್ತವೆ.

9ಇಸ್ರಾಯೇಲ್‌ ಮಕ್ಕಳು ಐಗುಪ್ತ ದೇಶದೊಳಗಿಂದ ಬಂದ ಕಾಲದಲ್ಲಿ ಕರ್ತನು ಅವರಿಗೆ ಒಡಂಬಡಿಕೆ ಮಾಡಿದಾಗ ಮೋಶೆಯು ಹೋರೇಬಿನ ಬಳಿಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಿಗೆಗಳ ಹೊರತಾಗಿ ಅದರಲ್ಲಿ ಮತ್ತೇನೂ ಇರಲಿಲ್ಲ.

೧ ಅರಸುಗಳು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी