ಯಾಜಕಕಾಂಡ 8:13

ಮೋಶೆಯು ಆರೋನನ ಮಕ್ಕಳನ್ನು ಕರತಂದು ಅವರ ಮೇಲೆ ಮೇಲಂಗಿಗಳನ್ನು ಹಾಕಿ ಅವರ ನಡುಗಳನ್ನು ಕಟ್ಟಿ ಕರ್ತನು ಮೋಶೆಗೆ ಆಜ್ಞಾಪಿಸಿದಂತೆ ಅವರ ಮೇಲೆ ಕುಲಾಯಿಗಳನ್ನು ಇಟ್ಟನು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 8

11ಅವನು ಅದರಿಂದ ಯಜ್ಞವೇದಿಯ ಮೇಲೆ ಏಳು ಸಾರಿ ಚಿಮುಕಿಸಿ ಯಜ್ಞ ವೇದಿಯನ್ನೂ ಅದರ ಎಲ್ಲಾ ಪಾತ್ರೆಗಳನ್ನೂ ಗಂಗಾಳ ವನ್ನೂ ಪೀಠವನ್ನೂ ಅಭಿಷೇಕಿಸಿ ಅವುಗಳನ್ನು ಪವಿತ್ರ ಮಾಡಿದನು.

12ಅವನು ಆರೋನನ ತಲೆಯ ಮೇಲೆ ಅಭಿಷೇಕ ತೈಲವನ್ನು ಸುರಿದು ಅವನನ್ನು ಪವಿತ್ರ ಮಾಡುವದಕ್ಕಾಗಿ ಅಭಿಷೇಕಿಸಿದನು.

13ಮೋಶೆಯು ಆರೋನನ ಮಕ್ಕಳನ್ನು ಕರತಂದು ಅವರ ಮೇಲೆ ಮೇಲಂಗಿಗಳನ್ನು ಹಾಕಿ ಅವರ ನಡುಗಳನ್ನು ಕಟ್ಟಿ ಕರ್ತನು ಮೋಶೆಗೆ ಆಜ್ಞಾಪಿಸಿದಂತೆ ಅವರ ಮೇಲೆ ಕುಲಾಯಿಗಳನ್ನು ಇಟ್ಟನು.

14ಪಾಪದ ಬಲಿಗಾಗಿ ಅವನು ಹೋರಿಯನ್ನು ತಂದನು. ಆರೋನನೂ ಅವನ ಕುಮಾರರೂ ಪಾಪದ ಬಲಿಗಾಗಿ ಆ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.

15ಆಗ ಅವನು ಅದನ್ನು ವಧಿಸಿ ದನು; ಮೋಶೆಯು ಅದರ ರಕ್ತವನ್ನು ತೆಗೆದುಕೊಂಡು ಯಜ್ಞವೇದಿಯ ಮೇಲಿರುವ ಕೊಂಬುಗಳಿಗೆ ಸುತ್ತಲೂ ತನ್ನ ಬೆರಳಿನಿಂದ ಹಚ್ಚಿ ಯಜ್ಞವೇದಿಯನ್ನು ಶುದ್ಧೀಕರಿಸಿ ಉಳಿದ ರಕ್ತವನ್ನು ಯಜ್ಞವೇದಿಯ ಅಡಿಯಲ್ಲಿ ಹೊಯ್ದನು. ಅದರ ಮೇಲೆ ಸಂಧಾನಮಾಡುವದಕ್ಕಾಗಿ ಅದನ್ನು ಪವಿತ್ರಮಾಡಿದನು.

ಯಾಜಕಕಾಂಡ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी