ಆದಿಕಾಂಡ 1:20

ದೇವರು--ಚಲಿಸುವ ಜೀವಜಂತುಗಳನ್ನು ನೀರು ಗಳು ಸಮೃದ್ಧಿಯಾಗಿ ಬರಮಾಡಲಿ; ಭೂಮಿಯ ಮೇಲೆ ಆಕಾಶದ ವಿಶಾಲದಲ್ಲಿ ಪಕ್ಷಿಗಳು ಹಾರಾಡಲಿ ಅಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 1

18ಇದಲ್ಲದೆ ಅವು ಹಗಲನ್ನು ಮತ್ತು ರಾತ್ರಿಯನ್ನು ಆಳುವದಕ್ಕೂ ಬೆಳಕನ್ನು ಕತ್ತಲೆಯಿಂದ ಬೇರೆ ಮಾಡುವದಕ್ಕೂ ಇರಿಸಿದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.

19ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ನಾಲ್ಕನೆಯ ದಿನವಾಯಿತು.

20ದೇವರು--ಚಲಿಸುವ ಜೀವಜಂತುಗಳನ್ನು ನೀರು ಗಳು ಸಮೃದ್ಧಿಯಾಗಿ ಬರಮಾಡಲಿ; ಭೂಮಿಯ ಮೇಲೆ ಆಕಾಶದ ವಿಶಾಲದಲ್ಲಿ ಪಕ್ಷಿಗಳು ಹಾರಾಡಲಿ ಅಂದನು.

21ಇದಲ್ಲದೆ ತಮ್ಮ ಜಾತಿಯ ಪ್ರಕಾರ ನೀರುಗಳು ಸಮೃದ್ಧಿಯಾಗಿ ಬರಮಾಡಿದ ದೊಡ್ಡ ತಿಮಿಂಗಿಲಗಳನ್ನೂ ಚಲಿಸುವ ಪ್ರತಿಯೊಂದು ಜೀವ ಜಂತುಗಳನ್ನೂ ತನ್ನ ಜಾತಿಗನುಸಾರವಾದ ರೆಕ್ಕೆಗಳಿದ್ದ ಪ್ರತಿಯೊಂದು ಪಕ್ಷಿಯನ್ನೂ ದೇವರು ಸೃಷ್ಟಿಸಿದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.

22ಆಗ ದೇವರು ಅವುಗಳನ್ನು ಆಶೀರ್ವದಿಸಿ-- ಅಭಿವೃದ್ಧಿಯಾಗಿ ಹೆಚ್ಚಿ ಸಮುದ್ರಗಳ ನೀರುಗಳಲ್ಲಿ ತುಂಬಿಕೊಳ್ಳಲಿ ಮತ್ತು ಪಕ್ಷಿಗಳು ಭೂಮಿಯಲ್ಲಿ ಹೆಚ್ಚಲಿ ಅಂದನು.

ಆದಿಕಾಂಡ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी