ಬೆಳಗಿನ ಜಾವದಲ್ಲಿ ಕರ್ತನು ಅಗ್ನಿ ಮೇಘಗಳ ಸ್ತಂಭದೊಳಗಿಂದ ಐಗುಪ್ತ್ಯರ ದಂಡಿನ ಕಡೆಗೆ ನೋಡಿ ಅದನ್ನು ತೊಂದರೆಪಡಿಸಿ
22ಹೀಗೆ ಇಸ್ರಾಯೇಲ್ ಮಕ್ಕಳು ಸಮುದ್ರದ ಮಧ್ಯ ದಲ್ಲಿ ಒಣ ನೆಲದಲ್ಲೇ ಹೊರಟು ಹೋದರು. ನೀರು ಅವರಿಗೆ ಎಡಬಲದಲ್ಲಿ ಗೋಡೆಯಾಗಿತ್ತು.
23ಐಗು ಪ್ತ್ಯರೂ ಫರೋಹನ ಎಲ್ಲಾ ಕುದುರೆಗಳೂ ಅವನ ರಥಗಳೂ ಕುದುರೆಯ ಸವಾರರೂ ಅವರನ್ನು ಹಿಂದಟ್ಟಿ ಅವರ ಹಿಂದೆ ಸಮುದ್ರದ ಮಧ್ಯದಲ್ಲಿ ಸೇರಿದರು.
24ಬೆಳಗಿನ ಜಾವದಲ್ಲಿ ಕರ್ತನು ಅಗ್ನಿ ಮೇಘಗಳ ಸ್ತಂಭದೊಳಗಿಂದ ಐಗುಪ್ತ್ಯರ ದಂಡಿನ ಕಡೆಗೆ ನೋಡಿ ಅದನ್ನು ತೊಂದರೆಪಡಿಸಿ
25ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದ್ದರಿಂದ ಐಗುಪ್ತ್ಯರು ಕಷ್ಟದಿಂದ ಹೋಗು ವಂತೆ ಮಾಡಿದನು. ಆಗ--ಇಸ್ರಾಯೇಲಿನ ಎದುರಿ ನಿಂದ ಓಡಿಹೋಗೋಣ. ಯಾಕಂದರೆ ಕರ್ತನು ಐಗುಪ್ತ್ಯರಿಗೆ ವಿರೋಧವಾಗಿ ಅವರಿಗೋಸ್ಕರ ಯುದ್ಧ ಮಾಡುತ್ತಾನೆಂದು ಹೇಳಿಕೊಂಡರು.
26ಆಗ ಕರ್ತನು ಮೋಶೆಗೆ--ಐಗುಪ್ತ್ಯರ ಮೇಲೆಯೂ ಅವರ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನೀರು ತಿರಿಗಿ ಬರುವಹಾಗೆ ಸಮುದ್ರದ ಮೇಲೆ ಕೈಚಾಚು ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ