ಎಸ್ತೇರಳು 2:5

ಆದರೆ ಶೂಷನಿನ ಅರಮನೆಯಲ್ಲಿ ಬೆನ್ಯಾವಿಾನ ನವನಾದ ಕೀಷನ ಮಗನಾದ ಶಿವ್ಗೆಾ ಮಗನಾದ ಯಾಯಾರನ ಮಗನಾದ ಮೊರ್ದೆಕೈ ಎಂಬ ಹೆಸರುಳ್ಳ ಒಬ್ಬ ಯೆಹೂದ್ಯನಿದ್ದನು.

ಸಂದರ್ಭದೊಂದಿಗೆ ಓದಿ · ಎಸ್ತೇರಳು 2

3ರೂಪವತಿಯಾದ ಸಮಸ್ತ ಕನ್ಯಾಸ್ತ್ರೀಯರು ರಾಜ ಧಾನಿಯಾದ ಶೂಷನಿಗೆ ಸ್ತ್ರೀಯರು ಇರುವ ಅರಮ ನೆಗೆ, ಸ್ತ್ರೀಯರ ಮೇಲೆ ಕಾವಲಾಗಿ ಇರುವ ಅರಸನ ಅಧಿ ಕಾರಿಗಳಾದ ಹೇಗ್ಯನೆಂಬವನ ಕೈಗೆ ಒಪ್ಪಿಸಲ್ಪಡುವ ಹಾಗೆ ಅರಸನು ತನ್ನ ರಾಜ್ಯದ ಸಮಸ್ತ ಪ್ರಾಂತಗಳಲ್ಲಿ ಅಧಿಕಾರವನ್ನು ನೇಮಿಸಲಿ; ಅವರಿಗೆ ಶುಚಿ ಮಾಡಿ ಕೊಳ್ಳುವ ವಸ್ತುಗಳು ಕೊಡಲ್ಪಡಲಿ.

4ಅರಸನ ಕಣ್ಣು ಗಳಿಗೆ ಚೆನ್ನಾಗಿರುವ ಕನ್ನಿಕೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ ಅಂದನು. ಈ ಮಾತು ಅರಸನಿಗೆ ಚೆನ್ನಾಗಿ ಕಾಣಿಸಿದ್ದರಿಂದ ಹಾಗೆಯೇ ಮಾಡಿದನು.

5ಆದರೆ ಶೂಷನಿನ ಅರಮನೆಯಲ್ಲಿ ಬೆನ್ಯಾವಿಾನ ನವನಾದ ಕೀಷನ ಮಗನಾದ ಶಿವ್ಗೆಾ ಮಗನಾದ ಯಾಯಾರನ ಮಗನಾದ ಮೊರ್ದೆಕೈ ಎಂಬ ಹೆಸರುಳ್ಳ ಒಬ್ಬ ಯೆಹೂದ್ಯನಿದ್ದನು.

6ಅವನು ಬಾಬೆಲಿನ ಅರಸ ನಾದ ನೆಬೂಕದ್ನೆಚರನು ಸೆರೆಯಾಗಿ ತಂದ ಯೆಹೂ ದದ ಅರಸನಾಗಿರುವ ಯೆಹೋಯಾಕೀನನ ಸಂಗಡ ಯೆರೂಸಲೇಮಿನಿಂದ ಸೆರೆಯಾಗಿ ಒಯ್ಯಲ್ಪಟ್ಟವರಲ್ಲಿ ಒಬ್ಬನಾಗಿದ್ದನು.

7ಅವನು ತನ್ನ ಚಿಕ್ಕಪ್ಪನ ಮಗಳಾದ ಎಸ್ತೇರಳೆಂಬ ಹದಸ್ಸಳನ್ನು ಸಾಕಿದವನಾಗಿದ್ದನು; ಅವ ಳಿಗೆ ತಂದೆ ತಾಯಿಗಳು ಇರಲಿಲ್ಲ. ಈ ಕನ್ನಿಕೆಯು ರೂಪವತಿಯಾಗಿಯೂ ಸೌಂದರ್ಯವಂತಳಾಗಿಯೂ ಇದ್ದಳು. ಅವಳ ತಂದೆ ತಾಯಿಗಳು ಸತ್ತುಹೋದ ತರುವಾಯ ಮೊರ್ದೆಕೈ ಅವಳನ್ನು ತನ್ನ ಮಗಳ ಹಾಗೆ ತೆಗೆದುಕೊಂಡನು.

ಎಸ್ತೇರಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी