ಅದನ್ನು ಬಿಡಿಸುವಂತೆ ನಾನು ನಿನ್ನ ಶಿಷ್ಯರನ್ನು ಬೇಡಿಕೊಂಡೆನು; ಆದರೆ ಅದು ಅವರಿಂದ ಆಗಲಿಲ್ಲ ಅಂದನು.
38ಆಗ ಇಗೋ, ಆ ಗುಂಪಿನೊಳಗಿಂದ ಒಬ್ಬ ಮನುಷ್ಯನು ಕೂಗಿ--ಬೋಧಕನೇ, ನನ್ನ ಮಗನ ಮೇಲೆ ದೃಷ್ಟಿಯಿಡು ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ; ಯಾಕಂದರೆ ಅವನು ನನಗೆ ಒಬ್ಬನೇ ಮಗನು.
39ಇಗೋ, ದೆವ್ವವು ಅವನನ್ನು ಹಿಡಿಯುತ್ತಲೇ ಅವನು ಫಕ್ಕನೆ ಕೂಗಿಕೊಳ್ಳುತ್ತಾನೆ; ಇದಲ್ಲದೆ ಅದು ನೊರೆ ಸುರಿಯುವಷ್ಟು ಅವನನ್ನು ಒದ್ದಾಡಿಸುವದಲ್ಲದೆ ಜಜ್ಜುವದು. ಅದು ಅವನನ್ನು ಬಿಟ್ಟುಹೋಗುವದು ಕಷ್ಟ.
40ಅದನ್ನು ಬಿಡಿಸುವಂತೆ ನಾನು ನಿನ್ನ ಶಿಷ್ಯರನ್ನು ಬೇಡಿಕೊಂಡೆನು; ಆದರೆ ಅದು ಅವರಿಂದ ಆಗಲಿಲ್ಲ ಅಂದನು.
41ಯೇಸು ಪ್ರತ್ಯುತ್ತರ ವಾಗಿ--ಓ ನಂಬಿಕೆಯಿಲ್ಲದ ವಕ್ರಸಂತತಿಯೇ, ನಾನು ಎಷ್ಟು ಕಾಲ ನಿಮ್ಮೊಂದಿಗಿರಲಿ ಮತ್ತು ನಿಮ್ಮನ್ನು ಸಹಿಸಲಿ ಎಂದು ಹೇಳಿ--ನಿನ್ನ ಮಗನನ್ನು ಇಲ್ಲಿಗೆ ಕರಕೊಂಡು ಬಾ ಅಂದನು.
42ಅವನು ಇನ್ನೂ ಬರುತ್ತಿದ್ದಾಗಲೇ ದೆವ್ವವು ಅವನನ್ನು ಒದ್ದಾಡಿಸಿ ನೆಲಕ್ಕೆ ಅಪ್ಪಳಿಸಿತು. ಯೇಸು ಆ ಅಶುದ್ಧಾತ್ಮವನ್ನು ಗದರಿಸಿ ಮಗನನ್ನು ಸ್ವಸ್ಥಮಾಡಿ ಅವನನ್ನು ಅವನ ತಂದೆಗೆ ತಿರಿಗಿ ಒಪ್ಪಿ ಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ