ಆದರೆ ನಾವಂತೂ ಭ್ರಷ್ಠರಲ್ಲವೆಂದು ನಿಮಗೆ ಗೊತ್ತಾಗುವದೆಂದು ನಾನು ಭರವಸವುಳ್ಳ ವನಾಗಿದ್ದೇನೆ.
4ಬಲಹೀನತೆಯ ಮೂಲಕ ಆತನು ಶಿಲುಬೆಗೆ ಹಾಕಲ್ಪಟ್ಟಿದ್ದಾಗ್ಯೂ ದೇವರ ಬಲದಿಂದ ಇನ್ನೂ ಬದುಕುತ್ತಾನೆ; ನಾವು ಸಹ ಆತನಲ್ಲಿ ಬಲಹೀನ ರಾಗಿದ್ದೇವೆ, ಆದರೂ ನಾವು ನಿಮಗೋಸ್ಕರವಾಗಿ ದೇವರ ಬಲದಿಂದ ಆತನೊಂದಿಗೆ ಬದುಕುವೆವು.
5ನಂಬಿಕೆಯಲ್ಲಿ ನೀವು ಇದ್ದೀರೋ ಏನೋ ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ; ನಿಮ್ಮನ್ನು ನೀವೇ ಪರಿಶೋಧಿ ಸಿಕೊಳ್ಳಿರಿ; ನೀವು ಭ್ರಷ್ಠರಲ್ಲದಿದ್ದರೆ ಯೇಸು ಕ್ರಿಸ್ತನು ನಿಮ್ಮಲ್ಲಿದ್ದಾನೆಂದು ನಿಮ್ಮಷ್ಟಕ್ಕೆ ನೀವೇ ತಿಳಿದುಕೊಳ್ಳು ವದಿಲ್ಲವೋ?
6ಆದರೆ ನಾವಂತೂ ಭ್ರಷ್ಠರಲ್ಲವೆಂದು ನಿಮಗೆ ಗೊತ್ತಾಗುವದೆಂದು ನಾನು ಭರವಸವುಳ್ಳ ವನಾಗಿದ್ದೇನೆ.
7ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ; ಇದರಲ್ಲಿ ನಾವೇ ಯೋಗ್ಯರಾಗಿ ತೋರಿಬರಬೇಕೆಂದಲ್ಲ, ನಾವು ಭ್ರಷ್ಠರೆನಿಸಿಕೊಂಡರೂ ನೀವು ಒಳ್ಳೇದನ್ನು ಮಾಡುವವ ರಾಗ ಬೇಕೆಂಬದೇ.
8ಸತ್ಯಕ್ಕೆ ವಿರುದ್ಧವಾಗಿ ನಾವೇನು ಮಾಡದೆ ಸತ್ಯಕ್ಕಾಗಿಯೇ ಮಾಡುತ್ತೇವೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ