ಇಗೋ, ಕರ್ತನು ತನ್ನ ಸ್ಥಾನದಿಂದ ಹೊರಡುತ್ತಾನೆ; ಆತನು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ತುಳಿಯುವನು.
1ಯೆಹೂದದ ಅರಸನಾದ ಯೋಥಾಮ ಆಹಾಜ, ಹಿಜ್ಕೀಯ, ದಿವಸಗಳಲ್ಲಿ ಸಮಾರ್ಯದ ಯೆರೂಸಲೇಮಿನ ವಿಷಯವಾಗಿ ಮೋರೇಷೆತಿನವನಾದ ವಿಾಕನಿಗೆ ಉಂಟಾದ ಕರ್ತನ ವಾಕ್ಯವು.
2ಎಲ್ಲಾ ಜನಗಳೇ, ಕೇಳಿರಿ, ಭೂಮಿಯೇ, ಅದರ ಪರಿಪೂರ್ಣತೆಯೇ, ಕಿವಿಗೊಡಿರಿ; ಕರ್ತನಾದ ದೇವರು ತನ್ನ ಪರಿಶುದ್ಧ ಮಂದಿರದೊಳಗಿಂದ ಕರ್ತನು ನಿಮಗೆ ವಿರೋಧವಾಗಿ ಸಾಕ್ಷಿಯಾಗಿರಲಿ.
3ಇಗೋ, ಕರ್ತನು ತನ್ನ ಸ್ಥಾನದಿಂದ ಹೊರಡುತ್ತಾನೆ; ಆತನು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ತುಳಿಯುವನು.
4ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ಸುರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವವು; ತಗ್ಗುಗಳು ಸೀಳುವವು.
5ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೂ ಇಸ್ರಾಯೇಲಿನ ಮನೆತನದ ವರ ಪಾಪಗಳ ನಿಮಿತ್ತವೂ ಆಯಿತು; ಯಾಕೋಬಿನ ಅಪರಾಧವೇನು? ಸಮಾರ್ಯವಲ್ಲವೋ? ಯೆಹೂ ದದ ಉನ್ನತಸ್ಥಳಗಳೇನು? ಯೆರೂಸಲೇಮಲ್ಲವೋ?
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ