ಅವನ ಬುಡದ ಮೇಲೆ ಆಕಾಶದ ಪಕ್ಷಿಗಳೆಲ್ಲಾ ಕೂತುಕೊಳ್ಳುವವು; ಬಯಲಿನ ಎಲ್ಲಾ ಪ್ರಾಣಿಗಳು ಅವನ ರೆಂಬೆಗಳ ಬಳಿಯಲ್ಲಿರುವವು;
11ಆದದರಿಂದ ನಾನು ಅವನನ್ನು ಅನ್ಯಜನಾಂಗಗಳಲ್ಲಿ ಶೂರನಾದ ಒಬ್ಬನ ಕೈಗೆ ಒಪ್ಪಿಸಿದ್ದೇನೆ; ಇವನು ನಿಶ್ಚಯವಾಗಿ ಅವನನ್ನು ದಂಡಿಸುತ್ತಾನೆ. ಅವನ ದುಷ್ಟತ್ವದ ನಿಮಿತ್ತ ನಾನು ಅವನನ್ನು ತಳ್ಳಿಹಾಕಿದ್ದೇನೆ.
12ಜನಾಂಗಗಳಲ್ಲಿ ಭಯಂಕರವಾದ ಅಪರಿಚಿತರು ಅವನನ್ನು ಕಡಿದುಹಾಕು ವರು. ಎಲ್ಲಾ ಬೆಟ್ಟಗಳ ಮೇಲೆಯೂ ತಗ್ಗುಗಳಲ್ಲಿಯೂ ಅವನ ಕೊಂಬೆಗಳು ಬೀಳುವವು, ದೇಶದ ಹಳ್ಳಗಳ ಲ್ಲೆಲ್ಲಾ ಅವನ ರೆಂಬೆಗಳು ಮುರಿದುಹೋಗುವವು; ಭೂಮಿಯ ಜನಗಳೆಲ್ಲಾ ಅವನ ನೆರಳಿನಿಂದ ದೂರ ಸರಿದು ಅವನನ್ನು ಬಿಟ್ಟುಬಿಡುವರು.
13ಅವನ ಬುಡದ ಮೇಲೆ ಆಕಾಶದ ಪಕ್ಷಿಗಳೆಲ್ಲಾ ಕೂತುಕೊಳ್ಳುವವು; ಬಯಲಿನ ಎಲ್ಲಾ ಪ್ರಾಣಿಗಳು ಅವನ ರೆಂಬೆಗಳ ಬಳಿಯಲ್ಲಿರುವವು;
14ನೀರಾವರಿಯ ಯಾವ ಮರಗಳು ತಮ್ಮ ಎತ್ತರವನ್ನು ಹೆಚ್ಚಿಸಿಕೊಂಡು ತಮ್ಮ ತುದಿಯನ್ನು ಮೋಡಗಳಿಗೆ ತಗಲಿಸದೆ ಇರುವದರಿಂದ ನೀರನ್ನು ಹೀರುತ್ತಲಿರುವ ದೊಡ್ಡ ದೊಡ್ಡ ಮರಗಳು ಎತ್ತರವಾಗಿ ಚಾಚಿಕೊಳ್ಳದೆ ಇರಲೆಂದು ಹೀಗಾಯಿತು, ಅವೆಲ್ಲಾ ಮರಣದ ಪಾಲಾಗುವವು; ಅವುಗಳಿಗೆ ಅಧೋ ಲೋಕವೇ ಗತಿಯಾಗುವದು, ಪಾತಾಳಕ್ಕೆ ಇಳಿದು ಹೋದ ಮನುಷ್ಯ ಜನ್ಮದವರ ಬಳಿಗೆ ಒಂದೇ ಗುಂಪಾಗಿ ಸೇರುವವು.
15ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಅವನು ಸಮಾಧಿಗೆ ಇಳಿದ ದಿನದಲ್ಲಿ ಗೋಳಾಟ ಹುಟ್ಟಿಸುವೆನು, ಅವನಿಗಾಗಿ ನಾನು ಅಗಾಧವನ್ನು ಮುಚ್ಚುವೆನು; ನಾನು ಅದರ ಪ್ರವಾಹವನ್ನು ತಡೆಹಿಡಿಯುವೆನು; ಮಹಾ ಜಲವು ನಿಲ್ಲಿಸಲ್ಪಡುವವು. ನಾನು ಲೆಬನೋನನ್ನು ಸಹ ಅವನಿಗೋಸ್ಕರ ಗೋಳಾಡಿಸುವೆನು. ಬಯಲಿನ ಮರಗಳೆಲ್ಲಾ ಅವನಿಗೋಸ್ಕರ ಕುಗ್ಗಿಹೋಗುವವು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ